ಬಿಜೆಪಿಯಿಂದ ಶ್ರೀರಾಮಚಂದ್ರನೇ ಕಣಕ್ಕೆ!

Krishnaveni K
ಸೋಮವಾರ, 25 ಮಾರ್ಚ್ 2024 (10:20 IST)
ನವದೆಹಲಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೆಲವು ಅಚ್ಚರಿಯ ಅಭ್ಯರ್ಥಿಗಳಿಗೆ ಮಣೆ ಹಾಕಿದೆ. ಆ ಪೈಕಿ ಸಾಕ್ಷಾತ್ ಶ್ರೀರಾಮಚಂದ್ರನೂ ಸೇರಿದ್ದಾನೆ!

ಈ ಶ್ರೀರಾಮ ಚಂದ್ರ ಬೇರೆ ಯಾರೂ ಅಲ್ಲ. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರವಾಹಿಯಲ್ಲಿ ಶ್ರೀರಾಮನ ಪಾತ್ರ ಮಾಡುತ್ತಿದ್ದ ಅರುಣ್ ಗೋವಿಲ್. ರಾಮಾಯಣ ಧಾರವಾಹಿ ವೀಕ್ಷಿಸುತ್ತಿದ್ದ ಎಷ್ಟೋ ಮಂದಿ ಅರುಣ್ ಅವರಲ್ಲೇ ಶ್ರೀರಾಮನನ್ನು ಕಾಣುತ್ತಿದ್ದರು.

ಅದಕ್ಕೆ ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಅವರಿಗೆ ಸಿಕ್ಕ ಅಭೂತಪೂರ್ವ ಸ್ವಾಗತವೇ ಸಾಕ್ಷಿ. ಅರುಣ್ ಗೋವಿಲ್ ಅಯೋಧ‍್ಯೆಗೆ ಬಂದಾಗ ಜನ ಅವರಿಗೆ ನಿಜವಾಗಿಯೂ ರಾಮನೇ ಬಂದನೇನೋ ಎಂಬಂತೆ ಪುಷ್ಪ ಮಳೆ ಸುರಿಸಿ ಸ್ವಾಗತ ಕೋರಿದ್ದರು.

ಇದೀಗ ಅದೇ ಅರುಣ್ ಗೋವಿಲ್ ಗೆ ಬಿಜೆಪಿ ಉತ್ತರ ಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಹಲವು ಪಾತ್ರ ಮಾಡಿ ಮಿಂಚಿದ್ದ ಅರುಣ್ ಗೋವಿಲ್ ಇತ್ತೀಚೆಗೆ ಆರ್ಟಿಕಲ್ 370 ಸಿನಿಮಾದಲ್ಲಿ ಪ್ರಧಾನಿ ಮೋದಿ ಪಾತ್ರ ಮಾಡಿದ್ದರು. ಇದೀಗ ಬಿಜೆಪಿಯಿಂದಲೇ ಚುನಾವಣೆಗೆ ಸ್ಪರ್ದಿಸುತ್ತಿರುವುದು ವಿಶೇಷ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆ ಶಿವಕುಮಾರ್‌ ಸಿಎಂ ಆಗಬೇಕೆಂದ ಮಂಡ್ಯ ಶಾಸಕ, ಕಾರಣ ಕೊಟ್ಟಿದ್ದು ಹಾಗೇ

ಬೆಂಗಳೂರು ದರೋಡೆ ಕೇಸ್: ಒಟ್ಟು ಎಷ್ಟು ಹಣ ಸಿಕ್ಕಿದೆ ಪೊಲೀಸ್ ಆಯುಕ್ತರಿಂದ ಖಚಿತ ಮಾಹಿತಿ

ಮೆಗಾ ಸಿಟಿ ಪ್ರಾಜೆಕ್ಟ್, ಕೈ ಶಾಸಕ ಸಿಪಿ ಯೋಗೇಶ್ವರ್‌ಗೆ ಬಿಗ್ ರಿಲೀಫ್‌

ಕಾಂಗ್ರೆಸ್ ನಲ್ಲಿ ಕುರ್ಚಿ ಜಟಾಪಟಿ ನಡುವೆ ರಾಷ್ಟ್ರೀಯ ನಾಯಕರ ಭೇಟಿಯಾದ ವಿಜಯೇಂದ್ರ

ಸಿಎಂ ಆಗಲು ಮತ್ತೊಂದು ಹೊಸ ದಾಳ ಉರುಳಿಸಿದ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments