Select Your Language

Notifications

webdunia
webdunia
webdunia
webdunia

ಮುಜಾಫರ್‌ನಗರ್ ಗಲಭೆಗೆ ಬಿಜೆಪಿ, ಎಸ್‌ಪಿ ಹೊಣೆ: ತನಿಖಾ ಆಯೋಗ

ಬಿಜೆಪಿ
ಉತ್ತರಪ್ರದೇಶದಲ್ಲಿ ಕಳೆದ 2013ರ ಮುಜಾಫರ್‌ನಗರ್ ಗಲಭೆ ತನಿಖೆ ನಡೆಸುತ್ತಿದ್ದ ಸಮಿತಿ ವರದಿ ಸಲ್ಲಿಸಿದ್ದು ಗಲಭೆಯ ಹಿಂಸಾಚಾರಕ್ಕೆ ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ನೇರ ಕಾರಣವಾವಾಗಿದೆ ಎಂದು ಆರೋಪಿಸಿದೆ.
  
ನಿವೃತ್ತ ನ್ಯಾಯಮೂರ್ತಿ ವಿಷ್ಣು ಸಹಾಯ್ ಆಯೋಗ, 60 ಮಂದಿ ಸಾವನ್ನಪ್ಪಿ 50 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರಾದ ಮುಜಾಫರ್‌ನಗರ್ ಗಲಭೆಗೆ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಸ್ಥಳೀಯ ನಾಯಕರು ಕಾರಣರಾಗಿದ್ದಾರೆ ಎಂದು ವರದಿ ನೀಡಿದೆ. 
 
ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಹಿಂಸಾಚಾರ ಉಲ್ಭಣಿಸಲು ಅವಕಾಶ ನೀಡಿದ್ದಾರೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.
 
ವಿಷ್ಣು ಸಹಾಯ್ ಆಯೋಗದ ವರದಿಯನ್ನು ರಾಜ್ಯಪಾಲ ರಾಮ್ ನಾಯಕ್ ಅವರಿಗೆ ರವಾನಿಸಲಾಗಿದ್ದು, ನಂತರ ಮುಂದಿನ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿ ಅಖಿಲೇಶ್ ಯಾದವ್‌ಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ. 
 

Share this Story:

Follow Webdunia kannada