Publish Date: Sat, 08 Oct 2016 (19:23 IST)
Updated Date: Sat, 08 Oct 2016 (19:26 IST)
ಕಾಂಗ್ರೆಸ್ ಸೀಮಿತ ದಾಳಿಯನ್ನು ರಾಜಕೀಕರಣ ಮಾಡುತ್ತಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜಕೀಯ ಲಾಭಕ್ಕೋಸ್ಕರ ಈ ವಿಷಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೊಲೆ ಆರೋಪ ಹೊತ್ತವರು, ಜೈಲಿಗೆ ಹೋಗಿ ಬಂದವರು ಬೇರೆಯವರ ಕಡೆ ಬೆರಳು ತೋರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೆಸರನ್ನೆತ್ತದೆ ಶಾ ವಿರುದ್ಧ ಗುಡುಗಿದ್ದಾರೆ.
ಬಿಜೆಪಿ ಇಷ್ಟು ಕೆಳ ಮಟ್ಟಕ್ಕೆ ಇಳಿಯುತ್ತದೆ ಎಂದು ನಾವಂದಕೊಂಡಿರಲಿಲ್ಲ. ಅವರು ರಾಹುಲ್ ಗಾಂದಿ ಮೂಲವನ್ನು ಪ್ರಶ್ನಿಸುತ್ತಿದ್ದಾರೆ. ಅವರು ಜವಾಹರ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಬಗ್ಗೆ ಪ್ರಶ್ನೆಯನ್ನು ಎತ್ತುತ್ತಿದ್ದಾರೆ. ಇಂತಹ ಹೇಳಿಕೆ ನೀಡುತ್ತಿರುವ ಅಮಿತ್ ಶಾ ಅವರನ್ನು ಮೋದಿ ತಡೆಯಬೇಕು ಎಂದು ಸಿಬಲ್ ಹೇಳಿದ್ದಾರೆ .