ಜೈಪುರ : ಇತ್ತೀಚೆಗಷ್ಟೇ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಪಟ್ಟ ವಿಚಾರದ ಬಗ್ಗೆ ಎಡವಟ್ಟು ಹೇಳಿಕೆ ನೀಡಿದಕ್ಕೆ ಬಿಜೆಪಿ ಸಂಸದರಿಗೆ ಇತಿಹಾಸನ ಜ್ಞಾನ ಸ್ವಲ್ಪವೂ ಇಲ್ಲ ಎಂದು ಕಾಂಗ್ರೆಸ್ ಲೇವಡಿ ಮಾಡಿತ್ತು. ಇದೀಗ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ಲಾಲ್ ಸೈನಿ ಅವರು ಇತಿಹಾಸವನ್ನು ತಪ್ಪಾಗಿ ಉಲ್ಲೇಖಿಸಿ ಮತ್ತೊಮ್ಮೆ ಬಿಜೆಪಿಗೆ ಮುಜುಗರವನ್ನುಂಟುಮಾಡಿದ್ದಾರೆ.
ರಾಜಸ್ಥಾನದ ಅಲ್ವಾರ್‌ನಲ್ಲಿ ಗೋಸಾಗಾಣಿಕೆ ಮಾಡುತ್ತಿದ್ದವರನ್ನು ಕಳ್ಳರೆಂದು ಭಾವಿಸಿ ಜನರ ಗುಂಪೊಂದು ಒಬ್ಬಾತನನ್ನು ಹೊಡೆದು ಕೊಂದ ಘಟನೆ ಬಗ್ಗೆ ಮಾತನಾಡುವಾಗ ಬಿಜೆಪಿ ಅಧ್ಯಕ್ಷ ಮದನ್ ಲಾಲ್ ಸೈನಿ ಅವರು, 'ಹುಮಾಯೂನ್ ಸಾಯುವಾಗ ಆತ ಬಾಬರ್‌ನನ್ನು ಕರೆದು, ನೀವು ಹಿಂದೂಸ್ತಾನದಲ್ಲಿ ಆಡಳಿತ ಮುಂದುವರಿಸಬೇಕು ಎಂಬ ಬಯಸಿದ್ದರೆ ಮೂರು ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಗೋವುಗಳು, ಬ್ರಾಹ್ಮಣರು ಮತ್ತು ಮಹಿಳೆಯರನ್ನು ಗೌರವಿಸಬೇಕು' ಎಂದು ಸಲಹೆ ನೀಡಿದ್ದಾನೆ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.
ಬಾಬರ್ 1531ರಲ್ಲಿ ಮೃತಪಟ್ಟಿದ್ದರೆ, ಹುಮಾಯೂನ್ 1556ರಲ್ಲಿ ಕೊನೆಯುಸಿರೆಳೆದಿದ್ದ. ತಂದೆ ನಿಧನದ 25 ವರ್ಷದ ಬಳಿಕ ಮರಣಹೊಂದಿದ ಹುಮಾಯೂನ್, ಯಾವಾಗ ಮರಣಶಯ್ಯೆಯಲ್ಲಿದ್ದ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ