Publish Date: Wed, 27 Apr 2016 (12:06 IST)
Updated Date: Wed, 27 Apr 2016 (12:09 IST)
ಉತ್ತರಾಖಂಡ್‌ನಲ್ಲಿ ಪ್ರತಿಯೊಬ್ಬ ಶಾಸಕರನ್ನು ಖರೀದಿಸಲು ಬಿಜೆಪಿ 50 ಕೋಟಿ ರೂಪಾಯಿಗಳ ಆಫರ್ ನೀಡಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ.
ಇಬ್ಬರು ಕಾಂಗ್ರೆಸ್ ಶಾಸಕರಾದ ರಾಜೇಂದ್ರ ಭಂಡಾರಿ ಮತ್ತು ಜೀತ್ ರಾಮ್ ಸಾರ್ವಜನಿಕವಾಗಿ ಹೇಳಿಕೆ ನೀಡಿ, ಬಿಜೆಪಿ ಮುಖಂಡರು 50 ಕೋಟಿ ರೂಪಾಯಿಹಗಳ ಆಮಿಷವೊಡ್ಡಿದ್ದಲ್ಲದೇ ಅವರ ಕುಟುಂಬದ ಸದಸ್ಯರಿಗೆ ವಿಧಾನಸಭೆ ಟಿಕೆಟ್ ಮತ್ತು ರಾಜ್ಯಸಭೆ ಸದಸ್ಯತ್ವ ನೀಡುವುದಾಗಿ ಭರವಸೆ ನೀಡಿತ್ತು ಎಂದು ಆರೋಪಿಸಿದ್ದಾರೆ.
ಬಿಜೆಪಿ ಮುಖಂಡ ಸತ್ಪಾಲ್ ಮಹಾರಾಜ್ ಅವರೊಂದಿಗೆ ನಿಕಟವಾಗಿದ್ದಾರೆ ಎನ್ನಲಾದ ಇಬ್ಬರು ಕಾಂಗ್ರೆಸ್ ಶಾಸಕರು, ಮಹಾರಾಜ್ ಅವರೊಂದಿಗಿರುವುದು ವೈಯಕ್ತಿಕ ಸಂಬಂಧವೇ ಹೊರತು ರಾಜಕೀಯ ಸಂಬಂಧವಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಮತ್ತೊಬ್ಬ ಕಾಂಗ್ರೆಸ್ ಶಾಸಕ ವಿಧಾನಸಭೆಯ ಉಪಸಭಾ ಪತಿ ಅನುಸೂಯಾ ಪ್ರಸಾದ್ ಮೈಖುರಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗಲು ಸಿದ್ದತೆ ನಡೆಸಿದ್ದರು. ಆದರೆ, ಇಬ್ಬರು ಕಾಂಗ್ರೆಸ್ ಶಾಸಕರು ತಮ್ಮ ನಿಷ್ಠೆಯನ್ನು ಕಾಂಗ್ರೆಸ್ ಪಕ್ಷಕ್ಕೆ ತೋರಿದ್ದರಿಂದ ಅವರ ಯೋಜನೆ ವಿಫಲವಾಯಿತು ಎಂದು ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.