Select Your Language

Notifications

webdunia
webdunia
webdunia
webdunia

ಅತ್ಯಾಚಾರ ಮಾಡಿ ಹನಿಟ್ರ್ಯಾಪ್ ನಾಟಕವಾಡಿದನಾ ಬಿಜೆಪಿ ಸಂಸದ..?

ಅತ್ಯಾಚಾರ ಮಾಡಿ ಹನಿಟ್ರ್ಯಾಪ್ ನಾಟಕವಾಡಿದನಾ ಬಿಜೆಪಿ ಸಂಸದ..?
ನವದೆಹಲಿ , ಸೋಮವಾರ, 1 ಮೇ 2017 (16:45 IST)
ಕೂಲ್ ಡ್ರಿಂಕ್ಸ್`ನಲ್ಲಿ ಮತ್ತು ಬರುವ ಔಷಧ ಬೆರೆಸಿ ನನ್ನ ಅಶ್ಲೀಲ ಭಂಗಿಗಳ ಪೋಟೋ, ವಿಡಿಯೋ ತೆಗೆದು ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂಬ ಗುನಜರಾತ್`ನ ಬಿಜೆಪಿ ಸಂಸದ ಪಿ.ಸಿ. ಪಟೇಲ್ ಆರೋಪವನ್ನ ಆಪಾದಿತ ಮಹಿಳೆ ತಳ್ಳಿ ಹಾಕಿದ್ದಾಳೆ.
 

ಇಂಡಿಯಾ ಟುಡೇ ಜೊತೆ ಮಾತನಾಡಿರುವ ಮಹಿಳೆ, ನನ್ನ ಮೇಲೆ ಸಂಸದ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಸುಪ್ರೀಂಕೋರ್ಟ್ ವಿಷಯ ಚರ್ಚೆಗೆ ಆತನ ಅಧಿಕೃತ ಮನೆಗೆ ಕರೆಸಿಕೊಂಡ ಸಂಸದ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅತ್ಯಾಚಾರವೆಸಗಿದ್ದಾನೆ.  ಪಟೇಲ್ ತನ್ನ ತಪ್ಪನ್ನ ಮುಚ್ಚಿಡಲು, ಗಮನ ಬೇರೆಡೆ ಸೆಳೆಯಲು ಈ ತಂತ್ರ ಹೂಡುತ್ತಿದ್ದಾರೆ.

ಈ ವಿಷಯವನ್ನ ಎಲ್ಲಿಯಾದರೂ ಬಾಯ್ಬಿಟ್ಟರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ನಮ್ಮದೇ ಸರ್ಕಾರವಿದೆ. ಗುಜರಾತ್, ಕೇಂದ್ರ, ಉತ್ತರಪ್ರದೇಶದಲ್ಲಿ ನಮ್ಮದೇ ಸರ್ಕಾರವಿದೆ. ಏನು ಬೇಕಾದರೂ ಮಾಡುತ್ತೇನೆ. ಜೀವಭಯದಿಂದ ಇಷ್ಟು ದಿನ ಸುಮ್ಮನಿದ್ದೆ ಎಂದು ತಿಳಿಸಿದ್ದಾರೆ.

ನನ್ನ ಆತ್ಮರಕ್ಷಣೆಗಾಗಿ ಸೆಕ್ಸ್ ವಿಡಿಯೋ ಮಾಡಿದೆ. ಮಾರ್ಚ್ 298ರಂದು ವಿಡಿಯೋ ಮಾಡಿದ್ದು, ಹಣಕ್ಕಾಗಿ ಯಾರಿಗೂ ಬ್ಲಾಕ್ ಮೇಲ್ ಮಾಡಿಲ್ಲ. ಲೈಂಗಿಕ ದೌರ್ಜನ್ಯ ತಡೆಯಲಾಗದ ಪರಿಸ್ಥಿತಿ ಬಂದಾಗ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಯೋಧರ ಶಿರಚ್ಛೇದನಾ ಮಾಡಿದ ಪಾಕಿಸ್ತಾನ ಸೇನೆ