ರೀಲ್ಸ್‌ ಮಾಡುವಾಗ ಯಮುನಾ ನದಿಗೆ ಜಾರಿ ಬಿದ್ದ ಬಿಜೆಪಿ ಶಾಸಕ ರವೀಂದರ್ ಸಿಂಗ್ ನೇಗಿ

Sampriya
ಮಂಗಳವಾರ, 28 ಅಕ್ಟೋಬರ್ 2025 (14:14 IST)
Photo Credit X
ನವದೆಹಲಿ: ನದಿ ಸ್ವಚ್ಛತಾ ಜಾಗೃತಿ ಅಭಿಯಾನದ ರೀಲ್ ಮಾಡುವಾಗ ದೆಹಲಿಯ ಬಿಜೆಪಿ ಶಾಸಕ ರವೀಂದರ್ ಸಿಂಗ್ ನೇಗಿ ಯಮುನಾ ನದಿಗೆ ಜಾರಿ ಬಿದ್ದಿದ್ದಾರೆ.

ಛತ್ ಪೂಜಾ ಆಚರಣೆಯ ನಡುವೆ ಯಮುನಾ ನದಿಯ ಸ್ವಚ್ಛತೆಯ ಬಗ್ಗೆ ರಾಜಕೀಯ ಜಟಾಪಟಿ ಮುಂದುವರಿದಿದ್ದು , ಪತ್ಪರ್‌ಗಂಜ್ ಶಾಸಕರು ಜಾರಿ ನೀರಿಗೆ ಬೀಳುತ್ತಿರುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ವಿಪಕ್ಷಗಳಿಗೆ ಆಹಾರವಾಗಿದೆ.

ಬಿಜೆಪಿ ನಾಯಕರು ದೇಶದ ಜನರಿಗೆ ಸುಳ್ಳು ಭರವಸೆ ನೀಡುವಲ್ಲಿ ನಿಸ್ಸೀಮರು. ಇದೇ ಅವರ ಯಮುನಾ ನದಿ ಸ್ವಚ್ಛತೆ. ಅವರು ಕ್ಯಾಮರಾಗಷ್ಟೇ ಸೀಮಿತ ಎಂದು ಆಮ್ ಆದ್ಮಿ ಪಕ್ಷದ ಶಾಸಕ ಸಂಜೀವ್ ಝಾ ಅವರು ಎಕ್ಸ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡು ಟೀಕಿಸಿದ್ದಾರೆ. 

ಪತ್ಪರ್ಗಂಜ್ ಶಾಸಕರು ಎರಡು ಬಾಟಲಿಗಳನ್ನು ಹಿಡಿದುಕೊಂಡು ನದಿಯ ದಡದಲ್ಲಿ ನಿಂತಿರುವುದು 19 ಸೆಕೆಂಡುಗಳ ವೀಡಿಯೊದಲ್ಲಿ ಕಂಡುಬರುತ್ತದೆ. ಮಂಡಿಯೂರಿ ಕುಳಿತಿದ್ದ ಸ್ಥಾನದಿಂದ ಮೇಲೇಳಲು ಪ್ರಯತ್ನಿಸುತ್ತಿರುವಾಗ, ನೇಗಿ ಸಮತೋಲನ ಕಳೆದುಕೊಂಡು ನೀರಿಗೆ ಜಾರಿ ಬೀಳುತ್ತಾರೆ. ಹತ್ತಿರದ ವ್ಯಕ್ತಿಯೊಬ್ಬರು ಸಹಾಯ ಮಾಡಲು ಧಾವಿಸುತ್ತಾರೆ, ಆದರೆ ಅಷ್ಟರಲ್ಲಾಗಲೇ ಅವರು ನದಿಯ ಒಳಗೆ ಬಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಎಎಪಿ ನಡುವಿನ ರಾಜಕೀಯ ವಾಗ್ವಾದ ತೀವ್ರಗೊಂಡಿದೆ. ಇಂದು ಮುಕ್ತಾಯಗೊಳ್ಳಲಿರುವ ಛತ್ ಪೂಜೆಗೆ ಸಿದ್ಧತೆಗಳ ಮಧ್ಯೆ, ಯಮುನಾ ನದಿಯ ಸ್ಥಿತಿಯ ಬಗ್ಗೆ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಎರಡೂ ಪಕ್ಷಗಳು ಪರಸ್ಪರ ಆರೋಪ ಮಾಡಿಕೊಳ್ಳುತ್ತಿವೆ.
 <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಜೆಪಿ ಸಾರ್ವಜನಿಕರ ನಂಬಿಕೆಯನ್ನು ಕಳೆದುಕೊಂಡಿದೆ: ಪ್ರಿಯಾಂಕಾ ಗಾಂಧಿ

ಮತ್ತಷ್ಟು ದಾಖಲೆ ಸಮೇತ ಎದುರು ಬರುತ್ತೇವೆ: ಗುಡುಗಿದ ಡಿಕೆ ಶಿವಕುಮಾರ್‌

ಸಿಡ್ನಿ: ಗುಂಡಿನ ದಾಳಿಯಲ್ಲಿ ಹಲವಾರು ಮಂದಿ ಸಾವು

ಆವರಿಸಿದ ದಟ್ಟ ಮಂಜು, ಕಾಲುವೆಗೆ ಉರುಳಿದ ಕಾರು, ದಂಪತಿ ದುರಂತ ಅಂತ್ಯ

ಇದೇ24ರಂದು ಬೆಂಗಳೂರಿನಿಂದ ಹುಬ್ಬಳ್ಳಿ ವಿಜಯಪುರಕ್ಕೆ ವಿಶೇಷ ರೈಲು

ಮುಂದಿನ ಸುದ್ದಿ
Show comments