Select Your Language

Notifications

webdunia
webdunia
webdunia
webdunia

ಬುರ್ಹಾನ್ ವಾನಿ ಕೊಂದವರಿಗೆ ಅಶೋಕ ಚಕ್ರ ನೀಡಿ: ಬಿಜೆಪಿ

BJP
ಜಮ್ಮು , ಸೋಮವಾರ, 1 ಆಗಸ್ಟ್ 2016 (16:05 IST)
ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನು ಕೊಂದ ಸೈನಿಕರಿಗೆ ಅಶೋಕ ಚಕ್ರ ನೀಡಬೇಕಾಗಿ ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಇಂದು ಒತ್ತಾಯಿಸಿದೆ.

ಭಯೋತ್ಪಾದಕ ವಾನಿಯನ್ನುಹತ್ಯೆಗೈದ ಭದ್ರತಾ ಸಿಬ್ಬಂದಿಗೆ ಸನ್ಮಾನಿಸಬೇಕು. ಅವರಿಗೆ ಅಶೋಕ ಚಕ್ರ ನೀಡಿ ಗೌರವಿಸಬೇಕು ಎಂದು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಅಶೋಕ್ ಖಜುರಿಯಾ ಹೇಳಿದ್ದಾರೆ.

ಜುಲೈ 9 ರಂದು ಉಗ್ರ ಬುರ್ಹಾನ್ ವಾನಿಯನ್ನು ಎನ್ ಕೌಂಟರ್‌ನಲ್ಲಿ ಭದ್ರತಾ ಸಿಬ್ಬಂದಿ ಕೊಂದು ಹಾಕಿದ್ದರು. ಆ ಬಳಿಕ ಕಾಶ್ಮೀರ ಅಕ್ಷರಶಃ ಹೊತ್ತಿ ಉರಿದಿತ್ತು. ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ನಡೆದ ಸಂಘರ್ಷದಲ್ಲಿ 49 ಜನರು , ಇಬ್ಬರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದರೆ ಬರೊಬ್ಬರಿ 5,500 ಜನರು ಗಾಯಗೊಂಡಿದ್ದರು.

ಏತನ್ಮಧ್ಯೆ ಬುರ್ಹಾನ್‌ವಾನಿ ಮತ್ತು ಜಮಾತ್-ಉದ್-ದಾವಾ (ಜೆಯುಡಿ)ದ ಮುಖ್ಯಸ್ಥ ಹಫೀಜ್ ಸಯೀದ್ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ. ಸ್ವತಃ ಸಯೀದ್ ಇದನ್ನು ಖಚಿತಪಡಿಸಿದ್ದಾನೆ.

ಕೆಲವು ದಿನಗಳ ಹಿಂದೆ ಬುರ್ಹಾನ್‌ವಾನಿ ನನಗೆ ಫೋನ್ ಮಾಡಿ, ನಿಮ್ಮೊಂದಿಗೆ ಮಾತನಾಡುವುದು ನನ್ನ ಕೊನೆಯ ಆಸೆ ಈಡೇರಿದೆ. ಹುತಾತ್ಮನಾಗಲು ಸಿದ್ಧನಾಗಿದ್ದೇನೆ’ ಎಂದು ಹೇಳಿದ್ದ ಎಂದೂ ಹಫೀಜ್ ಹೇಳಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕೇಶ್ ಅಂತ್ಯ ಸಂಸ್ಕಾರ: ದರ್ಶನ ಸಿಗದಿದ್ದರಿಂದ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ