Select Your Language

Notifications

webdunia
webdunia
webdunia
webdunia

ಗಾಂಧಿ ದೇಶದ ಆತ್ಮ: ಬಿಜೆಪಿ

ಗಾಂಧಿ ದೇಶದ ಆತ್ಮ: ಬಿಜೆಪಿ
ನವದೆಹಲಿ , ಶುಕ್ರವಾರ, 13 ಜನವರಿ 2017 (18:22 IST)
ಖಾದಿ ಗ್ರಾಮೋದ್ಯೋಗ ಕ್ಯಾಲೆಂಡರ್‌ನಲ್ಲಿ ಗಾಂಧೀಜಿ ಬದಲಾಗಿ ಮೋದಿ ಚಿತ್ರ ಬಳಸಿರುವ ಆರೋಪಕ್ಕೆ ಬಿಜೆಪಿ ಸ್ಪಷ್ಟನೆ ನೀಡಿದೆ.
"ಕೆಲವು ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವ ಅಗತ್ಯವಿದೆ.  ಕವರ್ ಮೇಲೆ ಮಹಾತ್ಮ ಗಾಂಧಿ ಚಿತ್ರವನ್ನು ಹೊಂದರಲೇಬೇಕು ಎಂಬ ಯಾವುದೇ ನಿಯಮ ಇಲ್ಲ.  1996, 2002, 2005, 2011, 2012 ಮತ್ತು 2013 ಕೆವೈಐಸಿ ಪಂಚಾಂಗಗಳಲ್ಲಿ ಮಖಪುಟದಲ್ಲಿ ಗಾಂಧಿ ಚಿತ್ರ ಮುದ್ರಿತವಾಗಿರಲಿಲ್ಲ 'ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ. 
 
ಗಾಂಧೀಜಿ ಮತ್ತು ಅವರ ವಿಚಾರಗಳು ನಮ್ಮ ದೇಶದ ಆತ್ಮವಿದ್ದಂತೆ. ಅವರ ತತ್ವಗಳ ಆಧಾರದ ಮೇಲೆ ನಾವೆಲ್ಲರೂ ಒಂದಾಗಿದ್ದೇವೆ. ಅವರು ನಮ್ಮ ಹೃದಯ ಮತ್ತು ಕೆಲಸಗಳಲಿದ್ದಾರೆ ಎಂದಿದ್ದಾರಾ ಪತ್ರ.
 
ಮೋದಿ ಮಹಾತ್ಮಾ ಗಾಂಧಿಯವರ ಸ್ಥಾನ ಪಡೆದಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಮಾವು, ಮೋದಿ ಅವರು ಪ್ರತಿ ವೇದಿಕೆಯಲ್ಲೂ ಗಾಂಧೀಜಿ ಚರಣಗಳಿಗೆ ವಂದಿಸುತ್ತಾರೆ. ನಾವು ಗಾಂಧಿ ಹೆಸರನ್ನು ರಾಜಕೀಯ ಕಾರಣಗಳಿಗೆ ಬಳಸಿಕೊಂಡಿಲ್ಲ. ಆದರೆ ಒಂದು ಕುಟುಂಬ ಅವರ ಹೆಸರನ್ನು ರಾಜಕಾರಣಕ್ಕೆ ಬಳಸಿಕೊಂಡಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
 
ಖಾದಿ ವಿಲೇಜ್ ಇಂಡಸ್ಟ್ರೀಸ್ ಕಮಿಷನ್ ಪ್ರಕಟಿಸಿರುವ 2017ನೇ ಸಾಲಿನ ಕ್ಯಾಲೆಂಡರ್ ಮತ್ತು ಡೈರಿಗಳಲ್ಲಿ ಚರಕ ನೂಲುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಚಿತ್ರದ ಬದಲು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಕಾಣಿಸಿಕೊಂಡಿದ್ದು ಬಹುದೊಡ್ಡ ವಿವಾದಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೈಕಲ್ ಚಿಹ್ನೆ: ಆದೇಶ ಕಾಯ್ದಿರಿಸಿದ ಆಯೋಗ