ಕೇಂದ್ರ ಸರಕಾರದ 500 ಮತ್ತು 1000 ರೂ. ನೋಟು ನಿಷೇಧ ಹೇರಿದ್ದರಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುತ್ತಿರುವುದು ನಿಜವಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ.
ನೋಟು ನಿಷೇಧದಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಕೆಲ ದಿನಗಳವರೆಗೆ ಸಮಸ್ಯೆಗಳಿರುತ್ತವೆ. ಆದರೆ, ಮುಂದೆ ದೇಶದ ಆರ್ಥಿಕತೆ ಚೇತರಿಕೆಗೆ ಪೂರಕವಾಗುತ್ತದೆ ಎಂದು ಉತ್ತರಾಖಂಡ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಶಾ ಹೇಳಿದ್ದಾರೆ.
ದೇಶದಲ್ಲಿ ಕಪ್ಪು ಹಣವಿರದ ಜನರು ನೋಟು ನಿಷೇಧದಿಂದ ಅಸಮಾದಾನಗೊಂಡಿಲ್ಲ. ಆದರೆ, ಕಪ್ಪು ಹಣ ಹೊಂದಿದವರು ಮಾತ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಭ್ರಷ್ಟ ಕಾಂಗ್ರೆಸ್ ಸರಕಾರದಿಂದ ದೂರವಿರಲು ಬಿಜೆಪಿ ಪಕ್ಷಕ್ಕೆ ಮತದಾರರು ಮತ ನೀಡಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.