Select Your Language

Notifications

webdunia
webdunia
webdunia
webdunia

ಪಾಕ್ 'ಹೈ ಕಮಿಷನ್' ಐಎಸ್ಐ ಅಡ್ಡಾ: ಬಿಜೆಪಿ

ಪಾಕ್ 'ಹೈ ಕಮಿಷನ್' ಐಎಸ್ಐ ಅಡ್ಡಾ: ಬಿಜೆಪಿ
ನವದೆಹಲಿ , ಬುಧವಾರ, 2 ನವೆಂಬರ್ 2016 (17:52 IST)
ಪಾಕ್ 'ಹೈ ಕಮಿಷನ್' ಐಎಸ್ಐ ಅಡ್ಡಾ ಎಂದು ಬಿಜೆಪಿ ಕಿಡಿಕಾರಿದೆ. 
ಇದು ರಾಜತಾಂತ್ರಿಕ ಕೇಂದ್ರ ಅಲ್ಲ. ಬದಲಾಗಿ ಭಾರತದ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಲು ಬಳಕೆಯಾಗುತ್ತಿದೆ. ಇತ್ತೀಚಿನ ವರದಿಗಳು ಇದನ್ನು ದೃಢೀಕರಿಸಿವೆ. ಪಾಕ್ 'ಹೈ ಕಮಿಷನ್ ಐಎಸ್ಐ ಅಡ್ಡಾ ಆಗಿ ಬದಲಾಗಿದೆ, ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಶರ್ಮಾ ಹೇಳಿದ್ದಾರೆ. 
 
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನ್ನಾಡುತ್ತಿದ್ದ ಅವರು, ಭೂಪಾಲ್‌ನಲ್ಲಿ 8 ಮಂದಿ ಸಿಮಿ ಕಾರ್ಯಕರ್ತರನ್ನು ಹತ್ಯೆಗೈದ ಪ್ರಕರಣವನ್ನು ರಾಜಕೀಯ ಲಾಭಕ್ಕೋಸ್ಕರ ಕಾಂಗ್ರೆಸ್ ಕೋಮುವಾದಿ ಬಣ್ಣ ಹಚ್ಚುತ್ತಿದೆ ಎಂದು ಕಿಡಿಕಾರಿದ್ದಾರೆ.
 
2008ರ ಮುಂಬೈ ದಾಳಿಯಾಗಲಿ ಅಥವಾ ಬಾಲ್ಟಾ ಹೌಸ್ ಎನ್ ಕೌಂಟರ್ ಆಗಿರಲಿ, ಉಗ್ರರ ಹತ್ಯೆಗೈದಾಗಲೆಲ್ಲ ಕಾಂಗ್ರೆಸ್ ಭದ್ರತಾ ಪಡೆಗಳತ್ತ ಪ್ರಶ್ನೆ ಹಾಕಿದೆ. ಒಂದು ಕಡೆ ಭದ್ರತಾ ಪಡೆ ತಮ್ಮ ಜೀವನವನ್ನು ಅಪಾಯಕ್ಕೆ ಒಡ್ಡಿಕೊಳ್ಳುತ್ತವೆ. ಇನ್ನೊಂದು ಕಡೆ ನಮ್ಮ ಇಟಲಿ ಕಾಂಗ್ರೆಸ್ ಮುಸ್ಲಿಂ ಮತಕ್ಕಾಗಿ ಅವರ ಎದೆಗುಂದಿಸುವ ಕೆಲಸ ಮಾಡುತ್ತಿದೆ. ಇಂತಹ ರಾಜಕೀಯ ಮುಸ್ಲಿಮರಿಗೆ ಮತ್ತು ದೇಶಕ್ಕೆ ಅಪಮಾನ ಮಾಡುವಂತಹ ಕೃತ್ಯವಷ್ಟೇ ಎಂದು ಅವರು ಆರೋಪಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

3 ಸಾವಿರ ಕೋಟಿ ಮೌಲ್ಯದ ಮ್ಯಾಂಡ್ರೆಕ್ಸ್ ಡ್ರಗ್ಸ್ ವಶ: ಬಾಲಿವುಡ್ ನಿರ್ಮಾಪಕ ಅರೆಸ್ಟ್