Daily Horoscope

Select Your Language

Notifications

webdunia
webdunia
webdunia
webdunia

ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿ ಆರ್‌ಎಸ್‌ಎಸ್‌ ಕೊಡುಗೆ ಶೂನ್ಯ: ಮಲ್ಲಿಕಾರ್ಜುನ ಖರ್ಗೆ

Congress president Mallikarjun Kharge
Photo Courtesy X
ಹಲ್ದ್ವಾನಿ: ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿ ಆರ್‌ಎಸ್‌ಎಸ್‌ ಏನೂ ಮಾಡಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು. 

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಿದ ಪಕ್ಷ ಕಾಂಗ್ರೆಸ್ ಎಂದು ಅವರು ಹೇಳಿದರು.

ಹಲ್ದ್ವಾನಿಯ ರಾಮ್‌ಲೀಲಾ ಮೈದಾನದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶಕ್ಕಾಗಿ ಏನನ್ನೂ ಮಾಡಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಅವುಗಳ ಕೊಡುಗೆ ಶೂನ್ಯ. ದೇಶದ ಸ್ವಾತಂತ್ರ್ಯಕ್ಕಾಗಿ ಆರ್‌ಎಸ್‌ಎಸ್‌ನ ಯಾವುದೇ ಸದಸ್ಯರು ಎಂದಾದರೂ ಜೈಲಿಗೆ ಹೋಗಿದ್ದಾರೆಯೇ? ಬಿಜೆಪಿಯ ಯಾವುದೇ ನಿಷ್ಠಾವಂತರು ಜೈಲಿಗೆ ಹೋಗಿದ್ದಾರೆಯೇ? ಒಂದು ವೇಳೆ ಕೆಲವರು ಹೋಗಿದ್ದರೂ, ಅವರು ಮೂಲತಃ ಕಾಂಗ್ರೆಸ್‌ನಲ್ಲಿದ್ದು ನಂತರ ಆ ಪಕ್ಷಕ್ಕೆ ವಲಸೆ ಹೋದವರಾಗಿರಬಹುದು. ಆದರೆ ಬಿಜೆಪಿಯ ಯಾವುದೇ ನಿಜವಾದ ಸದಸ್ಯರು ಆ ಚಳುವಳಿಯಲ್ಲಿ ಭಾಗವಹಿಸಲಿಲ್ಲ ಎಂದು ಕಿಡಿಕಾರಿದರು. 

ಇದು ಅವರ ಇತಿಹಾಸ, ಆದರೂ ಅವರು ನಿರಂತರವಾಗಿ ನಮಗೆ ದೇಶಭಕ್ತಿಯ ಪಾಠ ಮಾಡುತ್ತಾರೆ. ಸತ್ಯವೇನೆಂದರೆ, ನಾವೇ ನಿಜವಾದ ದೇಶಭಕ್ತರು. ಅವರು (ಪಕ್ಷ) ತೊರೆದು ಹೋದವರು. ಅದಕ್ಕಾಗಿಯೇ ಕಾಂಗ್ರೆಸ್ ಯಾರಿಂದಲೂ ಬೆದರುವುದಿಲ್ಲ ಮತ್ತು ಯಾರೂ ಅದನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಜನರೊಂದಿಗೆ ಬೆರೆಯುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರಯತ್ನವನ್ನು ಖರ್ಗೆ ಶ್ಲಾಘಿಸಿದರು. ಅವರು ಯುವಕರು, ರೈತರು, ವಿದ್ಯಾರ್ಥಿಗಳು ಮತ್ತು ಬಡವರ ಸಮಸ್ಯೆಗಳನ್ನು ನಿರಂತರವಾಗಿ ಪ್ರಸ್ತಾಪಿಸಿದ್ದಾರೆ ಮತ್ತು ಸಂವಿಧಾನವನ್ನು ರಕ್ಷಿಸಲು ಶ್ರಮಿಸಿದ್ದಾರೆ ಎಂದು ಹೇಳಿದರು. 

Share this Story:

Follow Webdunia kannada

ಮುಂದಿನ ಸುದ್ದಿ

RSS ವಿರುದ್ಧ ಕ್ರಮದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ