ಸರ್ಕಾರೀ ಬಂಗಲೆಯಿಂದ ಸೋಫಾ, ಟಿವಿ, ಎಸಿ ಎಲ್ಲಾ ಹೊತ್ತೊಯ್ದರಾ ಲಾಲೂ ಪುತ್ರ ತೇಜಸ್ವಿ ಯಾದವ್

Krishnaveni K
ಮಂಗಳವಾರ, 8 ಅಕ್ಟೋಬರ್ 2024 (09:43 IST)
ಪಾಟ್ನಾ: ತಾವು ಅಧಿಕಾರದಲ್ಲಿದ್ದಾಗ ಬಳಸುತ್ತಿದ್ದ ಸರ್ಕಾರೀ ಬಂಗಲೆಯಿಂದ ಆರ್ ಜೆಡಿ ನಾಯಕ, ಬಿಹಾರದ ಮಾಜಿ ಸಿಎಂ ತೇಜಸ್ವಿ ಯಾದವ್ ಟಿವಿ, ಸೋಫಾ, ಎಸಿ ಸೇರಿದಂತೆ ಐಷಾರಾಮಿ ವಸ್ತುಗಳನ್ನೆಲ್ಲಾ ಹೊತ್ತೊಯ್ದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ತೇಜಸ್ವಿ ಯಾದವ್ ಸರ್ಕಾರೀ ಬಂಗಲೆ ತೆರವು ಮಾಡಿದ ಬಳಿಕ ಅಲ್ಲಿ ಕೆಲವೊಂದು ವಸ್ತುಗಳೇ ಮಾಯವಾಗಿದೆ. ಟಿವಿ, ಸೋಫಾ, ಎಸಿ, ಬೆಡ್ ನ ಬೇಸ್, ಟೆನಿಸ್ ಕೋರ್ಟ್ ನ ನೆಲ ಹಾಸು ಇತ್ಯಾದಿ ವಸ್ತುಗಳನ್ನು ಅವರು ಹೊತ್ತೊಯ್ದಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಅಧಿಕಾರ ಕಳೆದುಕೊಂಡ ಮೇಲೆ ಸರ್ಕಾರೀ ಬಂಗಲೆ ತೆರವುಗೊಳಿಸುವಾಗ ಯಾವುದೇ ವಸ್ತುವನ್ನೂ ತೆಗೆದುಕೊಂಡು ಹೋಗುವಂತಿಲ್ಲ. ಸರ್ಕಾರೀ ಬಂಗಲೆಯಲ್ಲಿ ನೀಡುವ ಪ್ರತಿಯೊಂದು ವಸ್ತುವೂ ಸರ್ಕಾರಕ್ಕೆ ಸೇರಿದ್ದಾಗಿದೆ. ಆದರೆ ತೇಜಸ್ವಿ ತಾವು ಮನೆ ತೆರವುಗೊಳಿಸುವಾಗ ಎಲ್ಲವನ್ನೂ ಹೊತ್ತೊಯ್ದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಬಿಹಾರ ಬಿಜೆಪಿ ವಕ್ತಾರ ಡ್ಯಾನಿಶ್ ಇಕ್ಬಾಲ್ ಮಾಧ್ಯಮಗಳ ಮುಂದೆ ಆರೋಪ ಮಾಡಿದ್ದಾರೆ. ನನ್ನದು ಕೇವಲ ಆರೋಪವಲ್ಲ. ತೇಜಸ್ವಿ ಇದನ್ನೆಲ್ಲಾ ತೆಗೆದುಕೊಂಡು ಹೋಗಿದ್ದು ನಿಜ. ಇದಕ್ಕೆ ಸಾಕ್ಷಿಗಳಿವೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಡ್ಯಾನಿಶ್ ಆರೋಪಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈ ಒಂದು ಕಾರಣಕ್ಕೆ ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿಗೆ ಹೆಚ್ಚು ಒಲವು

ಪ್ರಿಯಕರನ ಜೊತೆ ಸೇರಿ ಗಂಡನ ಕೊಂದು ಡ್ರಮ್ ನಲ್ಲಿರಿಸಿದ್ದ ಮುಸ್ಕಾನ್ ಕತೆ ಏನಾಗಿದೆ ನೋಡಿ

ಯಡಿಯೂರಪ್ಪ ಅಂದೇ ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದರು

ಅಯೋಧ್ಯೆಯಲ್ಲಿ ರಾರಾಜಿಸಲಿದೆ ರಘುವಂಶದ ಕೇಸರಿ ಧ್ವಜ: ಪ್ರಧಾನಿ ಮೋದಿ ಚಾಲನೆ

ರಾಜ್ಯದ ಸಿಎಂ ಕುರ್ಚಿ ಫೈಟ್ ಪರಿಹಾರಕ್ಕೆ ಈ ಒಂದು ಮೀಟಿಂಗ್ ಮೇಲೇ ಎಲ್ಲರ ಕಣ್ಣು

ಮುಂದಿನ ಸುದ್ದಿ
Show comments