Select Your Language

Notifications

webdunia
webdunia
webdunia
webdunia

ಯೋಗ ದಿನದಿಂದ ದೂರ ಕಾಯ್ದುಕೊಂಡ ಬಿಹಾರ್ ಸರ್ಕಾರ

ಯೋಗ ದಿನದಿಂದ ದೂರ ಕಾಯ್ದುಕೊಂಡ ಬಿಹಾರ್ ಸರ್ಕಾರ
ಪಾಟ್ಣಾ , ಮಂಗಳವಾರ, 21 ಜೂನ್ 2016 (16:19 IST)
ಇಂದು ವಿಶ್ವ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದೆ. ಆದರೆ ಬಿಹಾರದಲ್ಲಿ ಯೋಗ ದಿನಾಚರಣೆಗಿಂತ ರಾಜಕೀಯ ಮೇಲಾಟವೇ ಪ್ರಾಬಲ್ಯ ಮೆರೆದಿದೆ. ಬಿಹಾರ್ ಸರ್ಕಾರ ಯೋಗದಿನಾಚರಣೆಯಿಂದ ತನ್ನನ್ನು ತಾನು ದೂರವಿಟ್ಟುಕೊಂಡಿದೆ. 
ರಾಜಧಾನಿ ಪಾಟ್ಣಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಪತಂಜಲಿ ಯೋಗಪೀಠ ಮತ್ತು ಬಾಬಾ ರಾಮದೇವ್ ಸಂಸ್ಥೆ ಯೋಗ ದಿನಕ್ಕಾಗಿ ಬಹುದೊಡ್ಡ ಸಿದ್ಧತೆಯನ್ನು ಮಾಡಿಕೊಂಡಿತ್ತು. ಅನೇಕ ನಾಯಕರನ್ನು ಆಡಳಿತ ಪಕ್ಷದ ಸಚಿವರನ್ನು ವಿರೋಧ ಪಕ್ಷದ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿತ್ತು. ಆದರೆ ಸರ್ಕಾರದ ಸಚಿವರು ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. 
 
ಕೇಂದ್ರ ದೂರಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಬಿಹಾರದಲ್ಲಿ ನಡೆದ ಯೋಗದಿನದ ನೇತೃತ್ವ ವಹಿಸಿದ್ದರು. ಬಿಜೆಪಿಯ ಇತರ ನಾಯಕರಾದ ಪ್ರೇಮ್ ಕುಮಾರ್, ಬಿಹಾರ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ನಿತಿನ್ ನವೀನ್, ಸಂಜೀವ್ ಚೌರಾಸಿಯಾ ಮತ್ತು ಅರುಣ್ ಕುಮಾರ್ ಸಹ ಅವರಿಗೆ ಸಾಥ್ ನೀಡಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮದರ್ ತೆರೇಸಾ ಕೂಡ ಭಾರತ ಕ್ರಿಶ್ಚಿನೀಕರಣ ಪಿತೂರಿಯ ಭಾಗ: ಯೋಗಿ ಆದಿತ್ಯನಾಥ