900ಕೋಟಿ ರೂಪಾಯಿ ಅಕ್ರಮದ ಮೇವು ಹಗರಣದ ಕಡತಗಳು ಬಿಹಾರ ಪಶುಸಂಗೋಪನೆ ಇಲಾಖೆಯಿಂದ ನಾಪತ್ತೆಯಾಗಿದ್ದು, ಪಾಟ್ಣಾ ಸಚಿವಾಲಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಆರ್‌ಜೆಡಿ ವರಿಷ್ಠ ಮತ್ತು ಬಿಹಾರ್ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಈ ಮೇವು ಹಗರಣಕ್ಕೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ
ಅಪರಾಧಿಯಾಗಿದ್ದು ಅವರಿಗೆ ಒಂದು ವರ್ಷ ಜೈಲು ಶಿಕ್ಷೆಯನ್ನು ಸಹ ವಿಧಿಸಲಾಗಿತ್ತು. ಯಾವುದೇ ಚುನಾವಣೆಗೆ ಸ್ಪರ್ಧಿಸಲು ಸಹ
ಅವರನ್ನು ಅನರ್ಹಗೊಳಿಸಲಾಗಿದೆ.
ಕಡತಗಳು ಕಣ್ಮರೆಯಾಗಲು ಬಿಹಾರ್ ಸಿಎಂ ನಿತೀಶ್ ಕುಮಾರ್ ಕಾರಣ ಎಂದು ಭಾರತೀಯ ಜನತಾ ಪಕ್ಷ ಆರೋಪಿಸುತ್ತಿದೆ.
ಹೇಗೆ ಮತ್ತು ಯಾಕೆ ಲಾಲು ಪ್ರಸಾದ್ ಯಾದವರನ್ನು ರಕ್ಷಿಸುತ್ತಿದ್ದಾರೆ ಎನ್ನುವುದನ್ನು ಸಿಎಂ ನಿತೀಶ್ ಕುಮಾರ್ ಅವರೇ ಹೇಳಬೇಕು.
ಕಡತಗಳ ನಾಪತ್ತೆ ಬಿಹಾರ್ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಬಂಕಿಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಶಾಸಕ ನಿತಿನ್ ನವೀನ್ ತಿಳಿಸಿದ್ದಾರೆ.
ನಿತೀಶ್ ಅವರ ಜೆಡಿ(ಯು) ಲಾಲು ಅವರ ಆರ್‌ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಯೊಂದಿಗೆ ಬಿಹಾರದಲ್ಲಿ ಸರ್ಕಾರವನ್ನು ನಡೆಸುತ್ತಿದೆ.