Select Your Language

Notifications

webdunia
webdunia
webdunia
webdunia

14ರ ಹುಣ್ಣಿಮೆ ರಾತ್ರಿಯ ವಿಸ್ಮಯಕ್ಕೆ ನೀವೂ ಸಾಕ್ಷಿಯಾಗಿ

14ರ ಹುಣ್ಣಿಮೆ ರಾತ್ರಿಯ ವಿಸ್ಮಯಕ್ಕೆ ನೀವೂ  ಸಾಕ್ಷಿಯಾಗಿ
ನವದೆಹಲಿ , ಶುಕ್ರವಾರ, 4 ನವೆಂಬರ್ 2016 (10:53 IST)
ನವದೆಹಲಿ: ಈಗಷ್ಟೇ ದೀಪಾವಳಿಯ ಕತ್ತಲ ಅಮವಾಸ್ಯೆ ಕಳೆದಿದೆ. ಮುಂದಿರುವುದು ಕಾರ್ತಿಕ ಪೂರ್ಣಿಮೆ. ಈ ಪೂರ್ಣಿಮೆ ದಿನ ಪ್ರಕೃತಿಯಲ್ಲೊಂದು ವಿಸ್ಮಯ ನಡೆಯಲಿದೆ.
ಹೌದು, ಇಷ್ಟು ವರ್ಷಗಳ ಕಾಲ ಚಂದ್ರನನ್ನು ಸಣ್ಣದಾಗಿ ದೂರದಿಂದ ನೋಡುತ್ತಿದ್ದೇವು. ಆದರೆ ಬರುವ ಕಾರ್ತಿಕ ಹುಣ್ಣಿಮೆಯಂದು ಅಂದರೆ ನವೆಂಬರ್ 14ರಂದು 21ನೇ ಶತಮಾನದ ಅತಿ ದೊಡ್ಡ ಚಂದ್ರನನ್ನು ನೋಡುವ ಅವಕಾಶ ನಮ್ಮೆಲ್ಲರ ಪಾಲಿಗೆ.  ಅಂದು ಚಂದ್ರ, ಭೂಮಿಯ ಹತ್ತಿರಕ್ಕೆ ಬರಲಿದ್ದಾನೆ. ಹತ್ತರದಿಂದ ಆತನನ್ನು ಕಣ್ತುಂಬಿಸಿಕೊಳ್ಳುವ ಅಪರೂಪದ ಅವಕಾಶ ಸಿಗಲಿದೆ.
 
ಅಂದು ಚಂದ್ರನನ್ನು ಇಷ್ಟು ದಿನ ನೋಡಿದ ಗಾತ್ರಕ್ಕಿಂತ ಶೇ. 14 ರಷ್ಟು ದೊಡ್ಡದಾಗಿ ಕಾಣಬಹುದಲ್ಲದೆ, ಶೇ. 30ರಷ್ಟು  ಹೆಚ್ಚು ಪ್ರಕಾಶಮಾನವಾಗಿಯೂ ನೋಡಬಹುದು. ಇದೊಂದು ಅದ್ಬುತ ಕ್ಷಣವಾಗಲಿದೆ. ಸುಂದರ ಹಾಗೂ ಅತ್ಯಂತವಹೊಳಪುಳ್ಳ ಚಂದ್ರನನ್ನು ನೋಡಬೇಕೆಂದರೆ ಅಂದು ಅತ್ಯಂತ ಎತ್ತರ ಸ್ಥಳಕ್ಕೆ ಸ್ಥಳಕ್ಕೆ ತೆರಳುವುದು ಒಳ್ಳೆಯದು.
 
ಅಂದಹಾಗೆ, ನವೆಂಬರ್ 14 ರ ನಂತರ ಮತ್ತೆ ಈ ಅವಕಾಶ 2034ರ ನವೆಂಬರ್ 25 ರಂದು ದೊರೆಯಲಿದೆ ಎನ್ನುವುದು ಮತ್ತೊಂದು ವಿಶೇಷ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕರಾಳ ದಿನ: ಎಂಇಎಸ್ ವಿರುದ್ಧ ಗುಡುಗಿದ ರಾಜ್ ಠಾಕ್ರೆ