Select Your Language

Notifications

webdunia
webdunia
webdunia
webdunia

ಥಂಡಾ ಥಂಡಾ ಕೂಲ್, ಕೂಲ್; ಘೋರೆ ಘೋರೆ ತೃಣಮೂಲ್: ಬೆಂಬಲಿಗರ ಘೋಷಣೆ

ಥಂಡಾ ಥಂಡಾ ಕೂಲ್, ಕೂಲ್; ಘೋರೆ ಘೋರೆ ತೃಣಮೂಲ್: ಬೆಂಬಲಿಗರ ಘೋಷಣೆ
ಕೋಲ್ಕತಾ , ಗುರುವಾರ, 19 ಮೇ 2016 (14:45 IST)
ಆಡಳಿತಾರೂಢ ಟಿಎಂಸಿ ಭರ್ಜರಿ ಜಯದತ್ತ ಸಾಗುತ್ತಿರುವುದನ್ನು ಚುನಾವಣೆ ಫಲಿತಾಂಶಗಳು ಸಾಬೀತು ಮಾಡಿದ ಕೂಡಲೇ ಮಮತಾ ಬ್ಯಾನರ್ಜಿ ಅಧಿಕೃತ ನಿವಾಸದ ಹೊರಗೆ ಸಂಭ್ರಮಾಚರಣೆ ಮುಗಿಲುಮುಟ್ಟಿತು.  ಪಶ್ಚಿಮ ಬಂಗಾಳದ 293 ಸೀಟುಗಳಿಗೆ ಮತಎಣಿಕೆ ಆರಂಭವಾದ ಕೆಲವು ಗಂಟೆಗಳಲ್ಲಿ ತೃಣಮೂಲ ಕಾಂಗ್ರೆಸ್ ಬಂಗಾಳದಲ್ಲಿ ಪುನಃ ಅಧಿಕಾರದ ಗದ್ದುಗೆಗೆ ಏರಿ ಮಮತಾ ಮತ್ತೆ ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ. 
 
ನಿರೀಕ್ಷೆಯಂತೆ ತೃಣಮೂಲದ 199 ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು, ಎಡಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಕ್ರಮವಾಗಿ 37 ಮತ್ತು 41 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಬಿಜೆಪಿ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

ಉತ್ಸಾಹಿ ಬೆಂಬಲಿಗರು ಕಾಲಿಘಾಟ್ ನಿವಾಸದ ಹೊರಗೆ ಸೇರಿ ಮಮತಾ ಸಂಭವನೀಯ ಗೆಲುವನ್ನು ಆಚರಿಸಿದರು.  ಥಂಡಾ ಥಂಡಾ ಕೂಲ್, ಕೂಲ್; ಘೋರೆ ಘೋರೆ ತೃಣಮೂಲ್ ಘೋಷಣೆಗಳನ್ನು ಕೂಗಿದರು. 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಪುದುಚೇರಿ ಫಲಿತಾಂಶ: ಸಿಎಂ ರಂಗಸ್ವಾಮಿ, ನಮ್‌ಸಿವಂ ಮಧ್ಯೆ ಪ್ರಬಲ ಸ್ಪರ್ಧೆ