Webdunia - Bharat's app for daily news and videos

Install App

2023ರ ಚುನಾವಣೆ ಮುನ್ನವೇ ಕಾಂಗ್ರೆಸ್ ಎರಡು ಹೋಳಾಗುತ್ತೆ: ಈಶ್ವರಪ್ಪ ಭವಿಷ್ಯ

Webdunia
ಸೋಮವಾರ, 4 ಅಕ್ಟೋಬರ್ 2021 (14:29 IST)
ಮೈಸೂರು : ಮೈಸೂರು ಭಾಗದಲ್ಲಿ 20ಕ್ಕೂ ಹೆಚ್ಚು ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಭಾನುವಾರ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರಿಗೆ ಹೇಗಾದರೂ ಸರಿ ಸಿಎಂ ಆಗಬೇಕು ಅನ್ನೋ ಹುಚ್ಚು. ಡಿಕೆ ಶಿವಕುಮಾರ್ಗೆ ಬಿಜೆಪಿಯವರನ್ನ ಹೇಗಾದರೂ ಎಳೆದುಕೊಳ್ಳಬೇಕು ಅನ್ನೋ ಹುಚ್ಚು. ಈ ಇಬ್ಬರು ಹುಚ್ಚರನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕು. ಇದಕ್ಕೆ ಬೇರೆ ಏನು ಉತ್ತರ ಇಲ್ಲ ಎಂದು ಈಶ್ವರಪ್ಪ ಲೇವಡಿ ಮಾಡಿದರು.
ಕೆಲವರಿಗೆ ಎಂಎಲ್ಎ ಸೀಟ್ ಸಿಗಲಿಲ್ಲ ಅನ್ನೋ ಹುಚ್ಚು, ಇನ್ನೂ ಕೆಲವರಿಗೆ ಟಿಕೆಟ್ ಸಿಗಲಿಲ್ಲ ಅನ್ನೋ ಹುಚ್ಚು. ಸಿದ್ದರಾಮಯ್ಯರಿಗೆ ಸಿಎಂ ಆಗುವ ಹುಚ್ಚು ಕನಸು ಎಂದು ವ್ಯಂಗ್ಯವಾಡಿದ ಅವರು, ಕಳೆದ ಚುನಾವಣೆಯಲ್ಲಿ ಜನ ಯಾಕೆ ನಿಮ್ಮನ್ನು ಕೈ ಬಿಟ್ಟರು? ಚಾಮುಂಡೇಶ್ವರಿಯಲ್ಲಿ ಯಾಕೆ ಸೋತಿರಿ? ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ಜಾತಿಗಣತಿ ಗಣತಿ ವಿಚಾರವಾಗಿ, ಸಿದ್ದರಾಮಯ್ಯನವರು ಸಂಘಟನೆ ಮಾಡಲು ಅಡ್ಡ ದಾರಿ ತುಳಿದಿದ್ದಾರೆ. ಸದನದಲ್ಲಿ ಜಾತಿಗಣತಿ ಬಗ್ಗೆ ಯಾಕೆ ಮಾತನಾಡಲಿಲ್ಲ. ಸಿದ್ದರಾಮಯ್ಯನವರೇನು ಬಾಯಲ್ಲಿ ಕಡುಬು ಇಟ್ಟುಕೊಂಡಿದ್ರಾ..? ಸದನದಲ್ಲಿ ಜಾತಿಗಣತಿಯ ಧ್ವನಿ ಮಾಡ್ತೀವಿ ಅಂದ್ರಿ ಮಾಡುದ್ರಾ..? ಯಾಕ್ ಜಾತಿಗಣತಿ ಬಗ್ಗೆ ಮಾತಾಡಲಿಲ್ಲ. ಹಿಂದುಳಿದಿರುವ, ಅಲ್ಪಸಂಖ್ಯಾತರು ನಿಮಗೆ ಹೆಸರಿಗೆ ಮಾತ್ರನಾ..? ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಜಾತಿಗಣತಿ ವರದಿ ಸಿದ್ದವಾಗಿದ್ದರೂ ಕುಮಾರಸ್ವಾಮಿ ಮಂಡಿಸಲಿಲ್ಲ. ಆಗ ನಿಮ್ಮ ಬೆಂಬಲ ವಾಪಸ್ ತಗೋಬೇಕಿತ್ತು. ಯಾಕೆ ತಗೆದುಕೊಳ್ಳಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಈಶ್ವರಪ್ಪ ಪ್ರಶ್ನೆ ಮಾಡಿದರು.
ಇವರಿಗೆ ಯಾವುದೂ ಬೇಕಾಗಿಲ್ಲ. ಅಧಿಕಾರವೊಂದೇ ಇವರ ಗುರಿ. ಮುಂದಿನ ವಿಧಾನಸಭೆ ಚುನಾವಣೆಗೆ ಮುಂಚೆಯೇ ಕಾಂಗ್ರೆಸ್ ಎರಡು ಹೋಳಾಗುತ್ತೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಇನ್ನೂ ಒಂದೂವರೆ ವರ್ಷ ಕಾಯುವ ಅವಶ್ಯಕತೆ ಇಲ್ಲ. ಡಿ.ಕೆ. ಶಿವಕುಮಾರ್ಗೂ ಅಧಿಕಾರ ಬೇಕು. ಸಿದ್ದರಾಮಯ್ಯರಿಗೂ ಅಧಿಕಾರ ಬೇಕು. ಇದರಿಂದ ಕಾಂಗ್ರೆಸ್ ಎರಡು ಹೋಳಾಗುತ್ತೆ ಎಂದು ಮೈಸೂರಿನಲ್ಲಿ ಭವಿಷ್ಯ ನುಡಿದರು.
ಮುಂದಿನ ಚುನಾವಣೆ ಅತಂತ್ರ ಮಾಡುವುದು ಜೆಡಿಎಸ್ ಉದ್ದೇಶ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿ ಅವರ ಉದ್ದೇಶವನ್ನು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಕಷ್ಟ, ನೋವನ್ನ ಹೇಳಿಕೊಂಡಿದ್ದಾರೆ. ಅತಂತ್ರ ಸ್ಥಿತಿಯಾದರೆ ಯಾವುದಾರೂ ಪಕ್ಷದ ಜೊತೆ ಸೇರಿಕೊಂಡು ಆಡಳಿತ ಮಾಡಬಹುದು ಅನ್ನೋ ಭ್ರಮೆಯಲ್ಲಿ ಇದ್ದಾರೆ. ಅತಂತ್ರ ಅನ್ನೋ ಭಾವನೆ ಕುಮಾರಸ್ವಾಮಿ ಅವರಲ್ಲಿ ಇರಬಹುದು. ಅವರ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊಹ್ಲಿ, ಅನುಷ್ಕಾ ಆಶೀರ್ವಾದ ಪಡೆದಿದ್ದ ಪ್ರೇಮಾನಂದ ಮಹಾರಾಜ್ ಬಾಯಿಂದ ಇದೆಂಥಾ ಮಾತು

ಆಪರೇಷನ್ ಸಿಂದೂರ್‌ನಿಂದ ಪಾಕ್‌ ಉಗ್ರರರು ಇನ್ನೂ ನಿದ್ರೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ: ಮೋದಿ

ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ: ಸಕಲೇಶಪುರ ವ್ಯಕ್ತಿ ಅರೆಸ್ಟ್‌

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

ಕಲಾಸಿಪಾಳ್ಯ ಬಿಎಂಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಸ್ಪೋಟಕ ಪತ್ತೆ ಕೇಸ್: ಮೂವರು ಅರೆಸ್ಟ್

ಮುಂದಿನ ಸುದ್ದಿ
Show comments