Webdunia - Bharat's app for daily news and videos

Install App

ಪ್ರಧಾನಿ ಮೋದಿ ಮೊದ್ಲು ನಗುತ್ತಿದ್ದರು, ಈಗ ಅಳುತ್ತಿದ್ದಾರೆ: ರಾಹುಲ್ ಗಾಂಧಿ

Webdunia
ಶುಕ್ರವಾರ, 25 ನವೆಂಬರ್ 2016 (13:45 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ನೋಟ್ ಬ್ಯಾನ್ ಜಾರಿಗೊಳಿಸುವ ಮುನ್ನ ನಗುತ್ತಿದ್ದರು, ಈಗ ಅಳುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
 
ಪ್ರದಾನಮಂತ್ರಿ ಮೋದಿ ಸಂಸತ್ತಿನಲ್ಲಿ ಹಾಜರಾಗಿ ನೋಟು ನಿಷೇಧ ಜಾರಿಗೊಳಿಸುವ ಬಗ್ಗೆ ಯಾರು ಯಾರಿಗೆ ಮಾಹಿತಿ ನೀಡಿದ್ದರೂ ಎನ್ನುವುದನ್ನು ಲೋಕಸಭೆಗೆ ತಿಳಿಸಬೇಕು. ಆವಾಗ ಸತ್ಯ ಸಂಗತಿ ತಾನಾಗಿ ಹೊರಬರುತ್ತದೆ ಎಂದು ವಾಗ್ದಾಳಿ ನಡೆಸಿದರು.
 
ಪ್ರದಾನಿ ಮೋದಿ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ, ಬಿಜೆಪಿ ಸಂಸದೀಯ ಸಮಿತಿ ಸಭೆಯಲ್ಲಿ ನೋಟು ನಿಷೇಧ ಕುರಿತಂತೆ ಹೇಳಿಕೆ ನೀಡುವುದರಿಂದ ಯಾವುದೇ ಲಾಭವಾಗದು. ಧೈರ್ಯವಿದ್ದರೆ ಸಂಸತ್ತಿನಲ್ಲಿ ಬಂದು ಹೇಳಿಕೆ ನೀಡಲಿ ಎಂದು ಸವಾಲ್ ಹಾಕಿದರು.
 
ಲೋಕಸಭೆಯ ಕಲಾಪ ಆರಂಭವಾಗಿ ಒಂದು ವಾರ ಕಳೆದರೂ ನವದೆಹಲಿಯಲ್ಲಿಯೇ ಇರುವ ಮೋದಿ ಸಂಸತ್ತಿಗೆ ಬಂದು ನೋಟು ನಿಷೇಧ ಕುರಿತಂತೆ ಯಾಕೆ ಹೇಳಿಕೆ ನೀಡುತ್ತಿಲ್ಲ ಎನ್ನುವುದು ಮೂಲ ಪ್ರಶ್ನೆಯಾಗಿದೆ. ತಪ್ಪು ಮಾಡಿದ್ದರಿಂದಲೇ ಅವರಿಗೆ ಹೇಳಿಕೆ ನೀಡುವುದು ಕಷ್ಟಸಾಧ್ಯವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ತಿರುಗೇಟು ನೀಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments