Publish Date: Wed, 21 Jun 2023 (09:03 IST)
Updated Date: Wed, 21 Jun 2023 (01:58 IST)
ಮುಂಬೈ : ಮಹಿಳೆಯರಿಗೆ ಬ್ಯೂಟಿ ಕಾನ್ಶಿಯಸ್ ಸ್ವಲ್ಪ ಜಾಸ್ತಿ. ಹೀಗಾಗಿ ತಾವು ಚಂದಗಾಣಬೇಕು ಎಂದು ಏನೆಲ್ಲ ಸರ್ಕಸ್ ಮಾಡುತ್ತಾರೆ.
ಅಂತೆಯೇ ಇಲ್ಲೊಬ್ಬಳು ಯುವತಿ ತಾನು ಚಂದ ಕಾಣಿಸಬೇಕು ಎಂದು ಬರೋಬ್ಬರಿ 17,500 ರೂ ಕೊಟ್ಟು ಫೇಶಿಯಲ್ ಮಾಡಿಸಿಕೊಂಡಿದ್ದಾಳೆ. ಆದರೆ ಮುಂದೆ ಆಗಿದ್ದೇ ಬೇರೆ.
ಹೌದು. ಮುಖದ ಅಂದನ್ನು ಹೆಚ್ಚಿಸುವ ಸಲುವಾಗಿ ಯುವತಿ ಫೇಶಿಯಲ್ ಮಸಾಜ್ ಟ್ರೀಟ್ಮೆಂಟ್ ಮಾಡಿಸಿದ್ದಾಳೆ. ಆ ಬಳಿಕ ಆಕೆಯ ಮುಖದ ಚರ್ಮದಲ್ಲಿ ಸುಟ್ಟ ಗಾಯಗಳಾಗಿದ್ದು, ಶಾಶ್ವತ ಹಾನಿಗೊಳಗಾಗಿದೆ. ಈ ಹಿನ್ನೆಲೆ ಯುವತಿ ಮುಂಬೈನಲ್ಲಿರುವ ಬ್ಯೂಟಿ ಸಲೂನ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾಳೆ.