Webdunia - Bharat's app for daily news and videos

Install App

ಅನ್ಯಜಾತಿ ಯುವತಿಯನ್ನ ಪ್ರೀತಿಸಿದ್ದಕ್ಕೆ ದಲಿತ ಯುವಕನ ಬರ್ಬರ ಹತ್ಯೆ

Webdunia
ಸೋಮವಾರ, 11 ಅಕ್ಟೋಬರ್ 2021 (10:30 IST)
ಪ್ರೀತಿ ಮಾಡುವುದು ತಪ್ಪೇನಿಲ್ಲ ಅಂತ ಹಿರಿಯರೇ ಹೇಳುತ್ತಾರೆ. ಪೀತಿ ಅಂದರೇನೇ ಹಾಗೇ ಅದಕ್ಕೆ ಆಸ್ತಿ, ಅಂತಸ್ತು, ಜಾತಿ, ಬಡತನ ಇದು ಯಾವುದು ಅದಕ್ಕೆ ತಿಳಿಯುವುದಿಲ್ಲ. ಎರಡು ಮುಗ್ದ ಮನಸ್ಸು ಒಬ್ಬರನ್ನ ಒಬ್ಬರು ಅರ್ಥ ಮಾಡಿಕೊಳ್ಳುವುದೇ ಪ್ರೀತಿ.

ಇಂತಹ ಪ್ರೀತಿಗೆ ಅದೆಷ್ಟೋ ಬಾರಿ ಮನೆಯವರೇ ವಿಲನ್ ಆಗಿದ್ದಾರೆ. ಮಕ್ಕಳು ಬೇರೆ ಜಾತಿಯವರನ್ನ ತಿಸುತ್ತಿದ್ದಾರೆ ಅಂತ ತಮ್ಮ ಕೈಯಾರೆ ಮಕ್ಕಳನ್ನ ಕೊಂದ ಘಟನೆಗಳು ಕಣ್ಣು ಮುಂದೆ ಇವೆ. ರಾಜಸ್ಥಾನದಲ್ಲಿ ಪ್ರೀತಿ ವಿಚಾರಕ್ಕೆ ದಲಿತ ಯುವಕನಿಗೆ ದೊಣ್ಣೆಗಳಿಂದ ಬಡಿದು ಸಾಯಿಸಲಾಗಿದೆ.
ಅನ್ಯ ಜಾತಿ ಯುವತಿಯನ್ನ ಯುವಕನೊರ್ವ ಪ್ರೀತಿ ಮಾಡುತ್ತಿದ್ದನ ಸಹಿಸಿಕೊಳ್ಳಲಾಗದ ಯುವತಿ ಮನೆಯವರು, ದಲಿತ ಯುವಕನನ್ನ ಹುಡುಕಿ, ಎಳೆದುಕೊಂಡು ಹೋಗಿ ಮನಸೋ ಇಚ್ಛೆ ದೊಣ್ಣೆಯಿಂದ ಬಾರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ತನ್ನ ಮಗನನ್ನು ಹೊಡೆದು ಸಾಯಿಸಿದ್ದಾರೆ ಎಂಬ ವಿಚಾರ ಯುವಕನ ಪೋಷಕರಿಗೆ ಗೊತ್ತೆ ಇರಲಿಲ್ಲ. ಯುವಕನಿಗೆ ಥಳಿಸುವ ವಿಡಿಯೋ ವೈರಲ್ ಆದ ಬಳಿಕವಷ್ಟೇ ನನ್ನ ಮಗನನ್ನು ಕೊಂದಿದ್ದಾರೆ ಅಂತ ಅವರಿಗೆ ತಿಳಿದಿದೆ.
ರಾಜಸ್ಥಾನದ ಹನುಮನ್ಗರ್ನಲ್ಲಿ ಗುರುವಾರ ಈ ದುರ್ಘಟನೆ ಸಂಭವಿಸಿದೆ. ಇದೇ ಊರಿನ ದಲಿತ ಯುವಕನೊಬ್ಬ ಅನ್ಯಜಾತಿ ಯುವತಿಯನ್ನ ಪ್ರೀತಿಸುತ್ತಿದ್ದನಂತೆ. ಇದ್ದಕಿದ್ದ ಹಾಗೆ ಗುರುವಾರ ಸಂಜೆ 4:30ರಿಂದ ಯುವಕ ಗ್ರಾಮದಿಂದ ಕಣ್ಮರೆಯಾಗಿದ್ದ. ಇದಾದ ಕೆಲ ಹೊತ್ತಿನ ಬಳಿಕ ಆತನ ಶವ ಪತ್ತೆಯಾಗಿತ್ತು. ಕುಟುಂಬಸ್ಥರು ಇದನ್ನ ಕಂಡು ಆಘಾತಕ್ಕೆ ಒಳಗಾಗಿದ್ದರು.
ತನ್ನ ಮಗ ಯಾಕೆ ಮೃತಪಟ್ಟಿದ್ದಾನೆ ಎಂದು ಅವರಿಗೆ ತಿಳಿದಿರಲಿಲ್ಲ. ಅಷ್ಟಕ್ಕೂ ಇದೊಂದು ಕೊಲೆ ಅಂತಾನೂ ಯುವಕನ ಕುಟುಂಬಸ್ಥರಿಗೆ ಗೊತ್ತಿರಲಿಲ್ಲ. ಬಳಿಕ ದಲಿತ ಯುವಕನಿಗೆ ಯುವಕರ ಗುಂಪೊಂದು ಹಲ್ಲೆ ಮಾಡುವ ವಿಡಿಯೋ ವೈರಲ್ ಆಯ್ತು. ಈ ವಿಡಿಯೋ ನೋಡಿದ ಬಳಿಕವಷ್ಟೇ ತಮ್ಮ ಮಗನನ್ನು ಹೊಡೆದು ಸಾಯಿಸಿದ್ದಾರೆ ಎಂದು ಪೋಷಕರಿಗೆ ತಿಳಿದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್, ಸೋನಿಯಾ ಜತೆಗಿನ ಭೇಟಿ ಕುಟುಂಬದ ಜತೆ ಸಮಯ ಕಳೆದ ಹಾಗೇ: ಎಂಕೆ ಸ್ಟಾಲಿನ್‌

ಬಿಟ್ರೇ ಮೈಸೂರು ಸ್ಯಾಂಡಲ್ ಸೋಪ್‌ಗೆ ನಾನೇ ಫ್ರೀಯಾಗಿ ರಾಯಭಾರಿಯಾಗ್ತೀನಿ: ವಾಟಾಳ್ ನಾಗರಾಜ್‌

ಕರಾಳ ನೆನಪು ಮಾಸುವ ಮುನ್ನವೇ ಮತ್ತೆ ಕೋವಿಡ್ ಭೀತಿ: ಸಿಲಿಕಾನ್ ಸಿಟಿಯಲ್ಲಿ ಮಗುವಿಗೆ ಸೋಂಕು ದೃಢ

Gang Rape: ಸಾಂಗ್ಲಿಯಲ್ಲಿ MBBS ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್‌

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಅಧಿಕಾರ ಸರ್ಕಾರಕ್ಕಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments