Select Your Language

Notifications

webdunia
webdunia
webdunia
webdunia

ಬ್ಯಾಂಕ್ ಮರು ಬಂಡವಾಳೀಕರಣ ಪ್ರಶಂಸಿಸಿದ ಅಮಿತ್ ಷಾ

Bank
ನವದೆಹಲಿ , ಬುಧವಾರ, 25 ಅಕ್ಟೋಬರ್ 2017 (15:22 IST)
ನವದೆಹಲಿ: ಬ್ಯಾಂಕ್‌ ಮರು ಬಂಡವಾಳೀಕರಣಕ್ಕೆ 2.11 ಲಕ್ಷ ಕೋಟಿ ರೂ.ಗಳನ್ನು ಒದಗಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್‌ ಷಾ ಪ್ರಶಂಸಿಸಿದ್ದಾರೆ.

ಸರ್ಕಾರದ ಈ ಅಭೂತಪೂರ್ವ ಮತ್ತು ಕ್ರಾಂತಿಕಾರಕ ಆರ್ಥಿಕ ಕ್ರಮದಿಂದ ದೇಶದ ಉದ್ದಿಮೆಗಳಿಗೆ ತುಂಬಾ ಸಹಕಾರಿಯಾಗಲಿದೆ. ಯುವಕರಿಗೆ ಪರ್ಯಾಪ್ತ ಉದ್ಯೋಗಾವಕಾಶಗಳು ದೊರಕುತ್ತವೆ ಎಂದರು.

ಕೇಂದ್ರ ಸರ್ಕಾರ ದೇಶದಲ್ಲಿನ ಮೂಲಸೌಕರ್ಯ ಅಭಿವೃದ್ಧಿಗಾಗಿ 6.92 ಲಕ್ಷ ಕೋಟಿ ರೂ. ವಿನಿಯೋಗಿಸಲು ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ. ಬ್ಯಾಂಕ್‌ ಮರು ಬಂಡವಳೀಕರಣ ನಿರ್ಧಾರವು ಕೇಂದ್ರ ಸರ್ಕಾರದ ಐತಿಹಾಸಿಕ ಕ್ರಮ ಎಂದು ಹೇಳಿರುವ ಷಾ, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್‌ ಜೇಟ್ಲಿಯವರನ್ನು ಅಭಿನಂದಿಸಿದ್ದಾರೆ.

ಈ ರೀತಿಯ ದಿಟ್ಟ ನಿರ್ಧಾರಗಳು ದೇಶದ ಉದ್ಯಮಗಳಿಗೆ ಉತ್ತೇಜನವನ್ನು ನೀಡುವುದಲ್ಲಕ್ಕೆ ಯುವಕರಿಗೆ ಅಪಾರ ಪ್ರಮಾಣದ ಉದ್ಯೋಗಗಳನ್ನು ಒದಗಿಸುತ್ತವೆ ಎಂದು ಅಮಿತ್ ಷಾ ಟ್ವೀಟ್‌ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಬ್ಬರ್ ಸಿಂಗ್ ಟ್ಯಾಕ್ಸ್ ರಾಹುಲ್ ಹೇಳಿಕೆಗೆ ಸಚಿವ ಜೇಟ್ಲಿ ಗರಂ