Select Your Language

Notifications

webdunia
webdunia
webdunia
webdunia

ತ್ರಿವಳಿ ತಲಾಕ್‌ ನಿಷೇಧಿಸುವಂತೆ ಪ್ರಧಾನಿ ಮೋದಿಗೆ ಮುಸ್ಲಿಂ ಮಹಿಳಾ ವಕೀಲರ ಮನವಿ

ತ್ರಿವಳಿ ತಲಾಕ್‌ ನಿಷೇಧಿಸುವಂತೆ ಪ್ರಧಾನಿ ಮೋದಿಗೆ ಮುಸ್ಲಿಂ ಮಹಿಳಾ ವಕೀಲರ ಮನವಿ
ನವದೆಹಲಿ , ಭಾನುವಾರ, 19 ಮಾರ್ಚ್ 2017 (12:40 IST)
ತ್ರಿವಳಿ ತಲಾಕ್ ನಿಷೇಧಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮುಸ್ಲಿಂ ಸಮುದಾಯದ ಮಹಿಳಾ ವಕೀಲರು ಮನವಿ ಮಾಡಿದ್ದಾರೆ. 
 
ದೇಶದಲ್ಲಿರುವ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಕ್‌ನಿಂದ ನೋವು ಅನುಭವಿಸುತ್ತಿದ್ದಾರೆ. ಸ್ಥಳೀಯ ನ್ಯಾಯಾಲಯಗಳು ಮತ್ತು ಪೊಲೀಸ್ ಅಧಿಕಾರಿಗಳು ಕೂಡಾ ಸಹಾಯ ಹಸ್ತ ಒದಗಿಸುತ್ತಿಲ್ಲ. ಅನಕ್ಷರತೆ, ಪುರುಷರ ದಬ್ಬಾಳಿಕೆ ಮುಸ್ಲಿಂ ಮಹಿಳೆಯರ ಜೀವನಕ್ಕೆ ಸಂಕಷ್ಟ ತಂದಿರುವುದರಿಂದ ಮೋದಿ ಸರಕಾರ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದ್ದಾರೆ.   
 
ಮುಸ್ಲಿಂ ಮಹಿಳಾ ವಕೀಲರು ಆಯೋಜಿಸಿದ ಕಾರ್ಯಕ್ರಮದಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಬೇಟಿ ಬಚಾವೋ ಬೇಟಿ ಪಡಾವೋ ಮತ್ತು  ಮುಸ್ಲಿಂ ಬೆಹನೋನೆ ಮಾನಾ ಹೈ ಮೋದಿಜೀ ಕಾ ಸಾಥ್ ನಿಭಾನಾ ಹೈ ಎನ್ನುವ ಘೋಷಣೆಗಳನ್ನು ಕೂಗಲಾಯಿತು. 
 
ಮಾಜಿ ಸಿಎಂ ಅಖಿಲೇಶ್ ಯಾದವ್ ಮತ್ತು ಮಾಜಿ ಸಿಎಂ ಮಾಯಾವತಿ ಅಪರಾಧಿ ಹಿನ್ನೆಲೆಯುಳ್ಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರಿಂದ ಸೋಲನುಭವಿಸಿದ್ದಾರೆ. ಬಿಜೆಪಿ ಮುಸ್ಲಿಮರಿಗೆ ವಿರುದ್ಧವಾಗಿಲ್ಲ ಎನ್ನುವುದು ಖಚಿತವಾಗಿದ್ದರಿಂದ, ಉತ್ತರಪ್ರದೇಶ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪುರುಷರು, ಮಹಿಳೆಯರು ಬಿಜೆಪಿಗೆ ಮತ ನೀಡಿದ್ದಾರೆ ಎಂದು ಕಾಶ್ಮೇರೆ ಗೇಟ್ ನಿವಾಸಿ ಮಹಿಳಾ ವಕೀಲೆ ಶೆಹನಾಜ್ ಅಫ್ಜಲ್ ತಿಳಿಸಿದ್ದಾರೆ.   
 
ಯುವಕರಿಂದ ಇಂತಹ ರೇಪ್‌ನಂತಹ ತಪ್ಪು ಕಾರ್ಯಗಳು ನಡೆಯುವುದು ಸಹಜ ಎಂದು ಮುಲಾಯಂ ಸಿಂಗ್ ನೀಡಿದ ಹೇಳಿಕೆಯಂತೂ ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದು ಕಿಡಿಕಾರಿದ್ದಾರೆ. 
 
ಮತ್ತೊಬ್ಬ ಮುಸ್ಲಿಂ ಮಹಿಳೆ ವಕೀಲೆ ರೆಹಮಾನಿ ಮಾತನಾಡಿ, ತ್ರಿವಳಿ ತಲಾಕ್ ನಮ್ಮ ಸಮುದಾಯಕ್ಕೆ ಕಪ್ಪು ಚುಕ್ಕೆಯಾಗಿದೆ. ಅವಳು ತುಂಬಾ ಕುಳ್ಳಗಿದ್ದಾಳೆ, ಅವಳು ಸುಂದರಿಯಲ್ಲ , ಅವಳಿಗೆ ಅಡುಗೆ ಮಾಡಲು ಬರುವುದಿಲ್ಲ ಎನ್ನುವಂತಹ ಕ್ಷುಲ್ಲಕ ಕಾರಣಗಳನ್ನು ನೀಡಿ ವಿಚ್ಚೇದನ ನೀಡಲಾಗುತ್ತಿದೆ. ಇಷ್ಟಪಟ್ಟು ಮದುವೆಯಾದ ನಂತರ ಇಂತಹ ಕ್ಷುಲ್ಲಕ ಕಾರಣಗಳನ್ನು ನೀಡಿ ವಿಚ್ಚೇದನ ನೀಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
 
ರಾಷ್ಟ್ರೀಯ ಸ್ವಯಂ ಸೇವಕ ಸಂಘಧ ಮಾನ್ಯತೆ ಪಡೆದ ಮುಸ್ಲಿಮ್ ರಾಷ್ಟ್ರೀಯ ಮಂಚ ಅಧ್ಯಕ್ಷರು ಮಾತನಾಡಿ, ಇಲ್ಲಿಯವರೆಗೆ ತ್ರಿವಳಿ ತಲಾಕ್ ವಿರೋಧಿಸಿ 10 ಲಕ್ಷ ಸಹಿ ಸಂಗ್ರಹ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕರುವನ್ನ ಲೈಂಗಿಕ ಕ್ರಿಯೆಗೆ ಬಳಸಿಕೊಂಡ ಕಾಮುಕ ಅರೆಸ್ಟ್