Select Your Language

Notifications

webdunia
webdunia
webdunia
webdunia

ಎನ್‌ಡಿ ಟಿವಿ ಬ್ಯಾನ್: ದೇಶ ನಿರಂಕುಶತೆಯತ್ತ ಸಾಗುತ್ತಿದೆ ಎಂದ ಲಾಲು

ಎನ್‌ಡಿ ಟಿವಿ ಬ್ಯಾನ್: ದೇಶ ನಿರಂಕುಶತೆಯತ್ತ ಸಾಗುತ್ತಿದೆ ಎಂದ ಲಾಲು
ಲಕ್ನೋ , ಸೋಮವಾರ, 7 ನವೆಂಬರ್ 2016 (16:39 IST)
ಎನ್‌ಡಿ ಟಿವಿ ಮೇಲೆ ಒಂದು ದಿನದ ಬ್ಯಾನ್ ಮಾಡಿರುವುದಕ್ಕೆ ವಿರೋಧ ಪಕ್ಷಗಳ ನಾಯಕರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದ್ದು ಮತ್ತೀಗ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕೂಡ ಹರಿಹಾಯ್ದಿದ್ದಾರೆ. ಕೇಂದ್ರ ಸರ್ಕಾರದ ಈ ಕ್ರಮ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದ್ದು, ದೇಶ ನಿರಂಕುಶತೆಯತ್ತ ಜಾರುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. 

ಸಮಾಜವಾದಿ ಪಕ್ಷದ ರಜತಮಹೋತ್ಸವವನ್ನು ಉದ್ಘಾಟಿಸಿ ಮಾತನ್ನಾಡುತ್ತಿದ್ದ ಲಾಲು, ಎನ್‌ಡಿ ಟಿವಿ ಮೇಲೆ ಇಂದು ಏನಾಗುತ್ತಿದೆ ಎಂದು ನೋಡಿರುತ್ತಿರಿ. ನೀವು ಪಠಾಣ್‌ಕೋಟ್ ಉಗ್ರ ದಾಳಿಯನ್ನು ಬಿತ್ತರಿಸಿದಿರಿ ಎಂದು ಸರ್ಕಾರ ಹೇಳುತ್ತಿದೆ. ಸರ್ಕಾರ ಈ ವಾಹಿನಿಯನ್ನು ಗುರಿಯಾಗಿಸಿ ಕ್ರಮ ಕೈಗೊಂಡಿದೆ. ದೇಶ ನಿರಂಕುಶತೆಯತ್ತ ಸಾಗುತ್ತಿದೆ ಎಂದಿದ್ದಾರೆ. 
 
ಪಠಾಣ್ ಕೋಟ್ ಉಗ್ರರ ದಾಳಿ ಸಂದರ್ಭದ ಸೂಕ್ಷ್ಮ ವಿಚಾರಗಳನ್ನು ಬಿತ್ತರಿಸಿ, ಪ್ರಸಾರ ನಿಯಮ ಉಲ್ಲಂಘಿಸಿದ ಆರೋಪದಡಿ ನವೆಂಬರ್ 9ರ ಮಧ್ಯರಾತ್ರಿಯಿಂದ ನವೆಂಬರ್ 10ರ ಮಧ್ಯರಾತ್ರಿಯವರೆಗೆ 24ಗಂಟೆ ಯಾವುದೇ ಕಾರ್ಯಕ್ರಮ, ಸುದ್ದಿ ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರ ಎನ್‌ಡಿ ಟಿವಿಗೆ ಆದೇಶಿಸಿದೆ. 
 
ನೀವು ಬಿತ್ತರಿಸಿರುವ ಮಾಹಿತಿ ಉಗ್ರರ ಕೈಗೆ ಸಿಕ್ಕರೆ ಕೇವಲ ದೇಶದ ಭದ್ರತೆಗಷ್ಟೇ ಅಲ್ಲ, ನಾಗರಿಕರ ಮತ್ತು ಭದ್ರತಾ ಸಿಬ್ಬಂದಿ ಜೀವಕ್ಕೂ ಹಾನಿ ತಲುಪಿಸುವಂತದ್ದು ಎಂದು ಕೇಂದ್ರ ಸುದ್ದಿ ವಾಹಿನಿಗೆ ಹೇಳಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಸಿ ಮದುವೆಯಾದರೇ ಮಠಾಧೀಶರು?