ನವದೆಹಲಿ: ಜಾಲಿಯಾಗಿ ಸುತ್ತಾಡುವಾಗ ಕೈಯಲ್ಲೊಂದು ಬಾಟಲಿ ಹಿಡಿದು ಎಣ್ಣೆ ಹೊಡೆಯಬಹುದು ಎಂದು ಕನಸು ಕಾಣುವವರಿಗೆಲ್ಲಾ ಒಂದು ಬ್ಯಾಡ್ ನ್ಯೂಸ್. ಇಂದಿನಿಂದ ಹೆದ್ದಾರಿಗಳ ಪಕ್ಕದಲ್ಲೇ ಇರುವ ಮದ್ಯದ ಅಂಗಡಿಗಳಿಗೆಲ್ಲಾ ಬೀಗ ಬೀಳಲಿದೆ.
ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ 500 ಮೀ. ಸುತ್ತಮುತ್ತ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿನ್ನೆ ಆದೇಶ ಮಾಡಿತ್ತು. ಅದು ಇಂದಿನಿಂದ ಜಾರಿಗೆ ಬರಲಿದೆ. ಇದರ ಅನ್ವಯ ರಸ್ತೆಯ ಪಕ್ಕ ಇರುವ ಬಾರ್, ರೆಸ್ಟೋರೆಂಟ್, ಪಬ್ ಗಳಲ್ಲೂ ಮದ್ಯ ಮಾರಾಟ ಮಾಡುವಂತಿಲ್ಲ.
ಮದ್ಯ ಸೇವಿಸಿ ಡ್ರೈವ್ ಮಾಡುವುದರಿಂದ ಪ್ರತೀ ವರ್ಷಕ್ಕೆ 1.42ಲಕ್ಷ ಮಂದಿ ಸಾವಿಗೀಡಾಗುತ್ತಾರೆ ಎಂಬ ಅಧ್ಯಯನ ವರದಿಯ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಅಲ್ಲದೆ, ಮಾರ್ಚ್ 31 ರವರೆಗೆ ಪರವಾನಗಿ ಹೊಂದಿದ್ದ ಈ ಮದ್ಯದ ಅಂಗಡಿಗಳ ಪರವಾನಗಿ ಮುಂದುವರಿಸಲು ಅವಕಾಶ ನೀಡಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ