Publish Date: Fri, 05 May 2017 (18:56 IST)
Updated Date: Fri, 05 May 2017 (19:00 IST)
ನವದೆಹಲಿ: ಕೆಎಫ್ ಸಿ, ಮೆಕ್ ಡೊನಾಲ್ಡ್ ಫಾಸ್ಟ್ ಫುಡ್ ಗಳಿಗೆ ಬಾಯಲ್ಲಿ ನೀರೂರಿಸದವರು ಯಾರು? ಆದರೆ ವಿದೇಶಿ ದೈತ್ಯರಿಗೆ ಸಡ್ಡು ಹೊಡೆಯಲು ಬಾಬಾ ರಾಮ್ ದೇವ್ ಅಂತಹದ್ದೇ ಆಹಾರ ವಸ್ತುಗಳನ್ನು ಮಾರುಕಟ್ಟೆಗೆ ಬಿಡಲಿದ್ದಾರೆ.
ಸುಮಾರು 400 ರೆಸಿಪಿಗಳನ್ನು ಈ ಆಹಾರ ಮಳಿಗೆಯಲ್ಲಿ ಗ್ರಾಹಕರಿಗೆ ಒದಗಿಸಲು ಬಾಬಾ ರಾಮ್ ದೇವ್ ಯೋಜನೆ ರೂಪಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಭಾರತೀಯ ಸಸ್ಯಾಹಾರಿ ಆಹಾರಗಳ ರುಚಿಗಿಂತ ಉತ್ತಮ ರುಚಿಯ ಆಹಾರಗಳು ಬೇರಿಲ್ಲ. ನಾವು ದಕ್ಷಿಣ ಮತ್ತು ಉತ್ತರ ಭಾರತೀಯ ಶೈಲಿಯ ಆಹಾರದ ನಡುವೆ ಬೇಧ ಮಾಡುವುದಿಲ್ಲ ಎಂದು ಬಾಬಾ ರಾಮ್ ದೇವ್ ಹೇಳಿದ್ದಾಗಿ ಪತ್ರಿಕೆ ವರದಿ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ