Daily Horoscope
✕

ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ ರಾಮದೇವ್

Webdunia
ಸೋಮವಾರ, 4 ಡಿಸೆಂಬರ್ 2023 (12:05 IST)
ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ ಬಾಬಾ ರಾಮದೇವ್, ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ ನಾಶವಾಗಿ ಹೊಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
 
ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಅಪಾಯಕಾರಿಯಾಗಿದ್ದಾರೆ. ನರೇಂದ್ರ ಮೋದಿ ಹಿಮಾಲಯವಾದ್ರೆ ರಾಹುಲ್ ಗಾಂಧಿ ಸಣ್ಣ ಇರುವೆಯಂತೆ ಎಂದು ಯೋಗ ಗುರು ಬಾಬಾ ರಾಮದೇವ್ ಲೇವಡಿ ಮಾಡಿದ್ದಾರೆ.
 
ಯೋಗ ಗುರು ಬಾಬಾ ರಾಮದೇವ್, ತಮ್ಮ ವಿರುದ್ಧ ದಾಖಲಿಸಲಾದ 81 ಪ್ರಕರಣಗಳು ಆಧಾರರಹಿತವಾಗಿದ್ದು ಕಾಂಗ್ರೆಸ್‌ನ ರಾಜಕೀಯ ಸೇಡಿನ ಕ್ರಮವಾಗಿದೆ ಎಂದು ಕಿಡಿಕಾರಿದ್ದಾರೆ.
 
ಕಾಂಗ್ರೆಸ್ ಪಕ್ಷ ಬಾಬಾ ರಾಮದೇವ್ ಅವರನ್ನು ಅಪರಾಧಿ ಮತ್ತು ಭಯೋತ್ಪಾದಕನಂತೆ ವರ್ತಿಸುತ್ತಿದೆ. ಕಾಂಗ್ರೆಸ್ ವಿರುದ್ಧ ಹೇಳಿಕೆಗಳನ್ನು ನೀಡಿದ್ದರಿಂದ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಆರೋಪಿಸಿದ್ದಾರೆ.
 
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನನ್ನೊಂದಿಗೆ ಜಂಟಿ ಸುದ್ದಿಗೋಷ್ಛಿಯಲ್ಲಿ ಪಾಲ್ಗೊಳ್ಳಲಿ. ನನ್ನ ಎಲ್ಲಾ ಆರೋಪಗಳಿಗೆ ತಕ್ಕ ಉತ್ತರ ನೀಡಲು ಸಿದ್ದವಾಗಿದ್ದೇನೆ. ಆದರೆ ದಯವಿಟ್ಟು ಸುಳ್ಳು ಹೇಳಬೇಡಿ ಎಂದು ಕಾಂಗ್ರೆಸ್ ಮುಖಂಡರಲ್ಲಿ ಮನವಿ ಮಾಡಿದ್ದಾರೆ.
 
ಕಾಂಗ್ರೆಸ್ ಪಕ್ಷ  ಭ್ರಷ್ಟಾಚಾರದ ವಿಶ್ವದಾಖಲೆಗಳನ್ನೇ ಮುರಿದುಹಾಕಿದೆ. ನನ್ನ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಹೊಸ ದಾಖಲೆ ಬರೆದಿದ್ದಾರೆ ಎಂದು ರಾಮದೇವ್ ಟೀಕಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿಯಲ್ಲಿ ಜಂತರ್ ಮಂತರ್ ಚಲೋ ತಡೆಗೆ ಬಿಗಿ ಭದ್ರತೆ: ಯೂಟ್ಯೂಬರ್ ಧ್ರುವ್ ರಾಠಿ ಕಸ್ಟಡಿಗೆ

ಪನಾಮದಲ್ಲಿ ಭೂಕಂಪ: ಕ್ಯಾಮರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ Video

ಜಬಲ್‌ಪುರ ಹೋಟೆಲ್‌ನಲ್ಲಿ ಹೈಡ್ರಾಮಾ: ಪರಸ್ತ್ರೀಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ, ಹಿಗ್ಗಾಮುಗ್ಗಾ ಥಳಿಸಿದ ಪತ್ನಿ Video

ಮಗುವಿಗಾಗಿ ಒದ್ದಾಡುತ್ತಿದ್ದ ತಾಯಿ ನಾಯಿಗೆ ಆನೆ ಮಾಡಿದ ಸಹಾಯ ನೋಡಿ ನೆಟ್ಟಿಗರು ಫಿದಾ video

ದೆಹಲಿಯಲ್ಲಿ ಹೈ ಅಲರ್ಟ್: ಕಾಕ್ರೋಚ್ ಗಳನ್ನು ತಡೆಯಲು ಪೊಲೀಸರ ಸರ್ಪಗಾವಲು

ಮುಂದಿನ ಸುದ್ದಿ
Show comments