ದಸರಾ ಹಬ್ಬದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿರುವುದು ಸರಿಯಲ್ಲ. ಪ್ರಧಾನಿ ದೇಶದ ಆಸ್ತಿಯಾಗಿದ್ದರಿಂದ ಅವರು ಎಲ್ಲಾ ಧರ್ಮಗಳ ಘೋಷಣೆಗಳನ್ನು ಕೂಗಬೇಕಾಗಿತ್ತು ಎಂದು ಸಚಿವ ಆಜಂಖಾನ್ ಹೇಳಿದ್ದಾರೆ.
ಪ್ರಧಾನಿ ಮೋದಿ ಎಲ್ಲಾ ಧರ್ಮಗಳನ್ನು ಸರಿಸಮನಾಗಿ ಕಾಣಬೇಕು. ಅಲ್ಲಾ ಹೋ ಅಕ್ಬರ್, ವಾಹೇಗುರು ಜಿ ಕಾ ಖಾಲ್ಸಾ ಎನ್ನುವ ಘೋಷಣೆಗಳನ್ನು ಕೂಡಾ ಕೂಗಬಹುದಿತ್ತು ಎಂದು ತಿಳಿಸಿದ್ದಾರೆ.
ಲಕ್ನೋದಲ್ಲಿ ನಡೆದ ದಸರಾ ಹಬ್ಬದ ಸಂದರ್ಭದಲ್ಲಿ ಪ್ರಧಾನಿ ಮೋದಿ ಜೈ ಶ್ರೀ ರಾಮ್ ಎಂದು ಕೂಗಿ ಭಾಷಣ ಆರಂಭಿಸಿದ್ದರು.
ಕೇಂದ್ರ ಸರಕಾರ ತ್ರಿವಳಿ ತಲಾಖ್ ಬಗ್ಗೆ ಮೂಗು ತೂರಿಸುತ್ತಿದೆ. ಯಾವ ರೀತಿ ವಿವಾಹ ನಡೆಯಬೇಕು, ಯಾವ ರೀತಿ ತಲಾಖ್ ನೀಡಬೇಕು ಎನ್ನುವುದರ ಬಗ್ಗೆ ಮುಸ್ಲಿಂ ಪರ್ಸನಲ್ ಲಾ ನಿರ್ಧರಿಸುತ್ತದೆ. ಕೇಂದ್ರ ಸರಕಾರ ಮುಸ್ಲಿಂ ಸಮುದಾಯದ ಭಾವೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಯೋಧ್ಯೆಯಲ್ಲಿ ರಾಮಾಯಣ ಮ್ಯೂಜಿಯಂ ನಿರ್ಮಾಣ ಮಾಡುವ ಕೇಂದ್ರ ಸರಕಾರದ ಕ್ರಮವನ್ನು ಕೂಡಾ ಸಚಿವ ಆಜಂ ಖಾನ್ ತರಾಟೆಗೆ ತೆಗೆದುಕೊಂಡರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ