Select Your Language

Notifications

webdunia
webdunia
webdunia
webdunia

ಪಂಚತಾರಾ ಹೋಟೆಲ್‌‌ಗಳಿಂದ ದೂರವಿರಿ: ಸಚಿವರಿಗೆ ಪ್ರಧಾನಿ ಸಲಹೆ

ಪಂಚತಾರಾ ಹೋಟೆಲ್‌‌ಗಳಿಂದ ದೂರವಿರಿ: ಸಚಿವರಿಗೆ ಪ್ರಧಾನಿ ಸಲಹೆ
ನವದೆಹಲಿ , ಭಾನುವಾರ, 20 ಆಗಸ್ಟ್ 2017 (17:34 IST)
ಸಂಸತ್ ಕಲಾಪಕ್ಕೆ ಗೈರುಹಾಜರಾಗುತ್ತಿರುವ ಸಚಿವರು, ಸಂಸದರ ವಿರುದ್ಧ ಕಿಡಿಕಾರಿದ್ದ ಪ್ರಧಾನಿ ಮೋದಿ, ಇದೀಗ ಸಚಿವರು ಪಂಚತಾರಾ ಹೋಟೆಲ್‌ ವಾಸ್ತವ್ಯದಿಂದ ದೂರವಿರುವಂತೆ ಸಲಹೆ ನೀಡಿದ್ದಾರೆ.
ಹಲವಾರು ಬಾರಿ ಮನವಿ ಮಾಡಿದರೂ ಸಂಸದರು, ಸಚಿವರು ಸಂಸತ್ ಕಲಾಪಕ್ಕೆ ಹಾಜರಾಗುತ್ತಿಲ್ಲ. ಕಲಾಪಕ್ಕೆ ಹಾಜರಾಗುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಗುಡುಗಿದ್ದಾರೆ.
 
ಅಧಿಕೃತ ಕಾರ್ಯಕ್ರಮಗಳಲ್ಲದೇ ಇದ್ದಾಗೂ ಸಚಿವರು, ಸಂಸದರು ಪಂಚತಾರಾ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡುತ್ತಿರುವುದು, ಆತ್ಮಿಯರಿಗಾಗಿ ಸರಕಾರಿ ಸೌಲತ್ತುಗಳನ್ನು ಬಳಸಿಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇಂತಹ ಐಷಾರಾಮಿ ಜೀವನಕ್ಕೆ ತಿಲಾಂಜಲಿ ನೀಡಿ ಎಂದು ಫರ್ಮಾನ್ ಹೊರಡಿಸಿದ್ದಾರೆ.
 
ಮುಂಬರುವ 2019ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೆ ಯಾವುದೇ ಕಪ್ಪು ಚುಕ್ಕೆಗಳು ಸರಕಾರದ ಮೇಲೆ ಬರಬಾರದು. ಭ್ರಷ್ಟಾಚಾರ ನಿರ್ಮೂಲನೆಗೆ ಆದ್ಯತೆ ನೀಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಪಕ್ಷಗಳನ್ನು ನಿಗ್ರಹಿಸಲು ಎಸಿಬಿ ರಚನೆ: ಆರ್.ಅಶೋಕ್