Select Your Language

Notifications

webdunia
webdunia
webdunia
webdunia

ಮಗಳನ್ನು ಹೊರಗೆಸೆದು ಅಮ್ಮನ ಮೇಲೆ ಅತ್ಯಾಚಾರ ಎಸಗಿದ ರಿಕ್ಷಾ ಚಾಲಕ!

ಮಗಳನ್ನು ಹೊರಗೆಸೆದು ಅಮ್ಮನ ಮೇಲೆ ಅತ್ಯಾಚಾರ ಎಸಗಿದ ರಿಕ್ಷಾ ಚಾಲಕ!
Haryana , ಮಂಗಳವಾರ, 6 ಜೂನ್ 2017 (10:23 IST)
ಹರ್ಯಾಣಾ: ರಿಕ್ಷಾ ಚಾಲಕನೊಬ್ಬ ತನ್ನ ಇಬ್ಬರು ಸಹಚರರೊಂದಿಗೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯನ್ನು 9 ತಿಂಗಳ ಹಸುಗೂಸನ್ನು ಹೊರಗೆಸೆದು ಅದರ ಸಾವಿಗೆ ಕಾರಣನಾದ ಘಟನೆ ಹರ್ಯಾಣದಲ್ಲಿ ನಡೆದಿದೆ.

 
ಗಂಡನ ಜತೆ ಮುನಿಸಿಕೊಂಡು 23 ವರ್ಷದ ಮಹಿಳೆ ಮಧ್ಯರಾತ್ರಿ ವೇಳೆಗೆ ತವರಿಗೆ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಳು. ಆಗಲೇ ಆ ಅಟೋದಲ್ಲಿ ಮೂವರು ಪ್ರಯಾಣಿಕರಿದ್ದರು.

ಆಕೆ ಆಟೋದಲ್ಲಿ ಕುಳಿತ ತಕ್ಷಣವೇ ಆರೋಪಿಗಳು ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದರು. ಆಗ ಆಕೆ ಪ್ರತಿಭಟಿಸಿದಾಗ ಕಂಕುಳದಲ್ಲಿದ್ದ 9 ತಿಂಗಳ ಮಗಳೂ ಅಳಲು ಪ್ರಾರಂಭಿಸಿದ್ದಳು. ತಮ್ಮ ಕೃತ್ಯಕ್ಕೆ ಅಡ್ಡಿ ಮಾಡುತ್ತಿದ್ದ ಮಗುವನ್ನು ನಿರ್ದಾಕ್ಷಿಣ್ಯವಾಗಿ ಆಟೋದಿಂದ ಹೊರಗೆಸೆದ ದುರುಳರು ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಹೊರಗೆಸೆಯಲ್ಪಟ್ಟ ರಭಸಕ್ಕೆ ಮಗು ಮೃತಪಟ್ಟಿದೆ.

ಆರಂಭದಲ್ಲಿ ಪ್ರತ್ಯಕ್ಷದರ್ಶಿಗಳು ಮಹಿಳೆಯೇ ಮಗುವನ್ನು ಹೊರಗೆಸೆದು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದರು. ಆದರೆ ನಂತರ ತನಿಖೆ ನಡೆಸಿದಾಗ ಅತ್ಯಾಚಾರ ಘಟನೆ ಬಯಲಾಗಿದೆ. ಆದರೆ ವಿಶೇಷವೆಂದರೆ, ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ದೂರಿರುವ ಮಹಿಳೆ ವೈದ್ಯಕೀಯ ಪರೀಕ್ಷೆಗೊಳಪಡಲು ನಿರಾಕರಿಸುತ್ತಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೈ-ಕ ಅಭಿವೃದ್ಧಿಯ ಹಣ ಮಹಾರಾಷ್ಟ್ರದ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಬಳಕೆ..?