Select Your Language

Notifications

webdunia
webdunia
webdunia
webdunia

ಸೊಸೆಯ ಕಿರುಕುಳಕ್ಕೆ ನೊಂದು ಆತ್ಮಹತ್ಯೆ: ಮೊಬೈಲ್‌ನಲ್ಲಿ ಸಾವಿನ ಚಿತ್ರೀಕರಣ

Auto driver
ಠಾಣೆ , ಸೋಮವಾರ, 26 ಡಿಸೆಂಬರ್ 2016 (12:25 IST)
ಆತ್ಮಹತ್ಯೆಗೆ ಶರಣಾದ ಆಟೋ ಚಾಲಕರೊಬ್ಬರು ತಾವು ಸಾವಿಗೆ ಶರಣಾಗುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಟ್ಟಿರುವುದು ಇಲ್ಲಿನ ಭಾಸ್ಕರ ನಗರದಲ್ಲಿ ನಡೆದಿದೆ.

ಈ ದುಡುಕಿನ ಕೃತ್ಯಕ್ಕೆ ಕೈ ಹಾಕುವ ಮುನ್ನ ಅವರು ತಮ್ಮ ಸಾವಿಗೆ ಇಂತವರೇ ಕಾರಣ ಎಂದು ಕೂಡ ಮೊಬೈಲ್‌ನಲ್ಲಿಯೇ ರೆಕಾರ್ಡ್ ಮಾಡಿಟ್ಟಿದ್ದಾರೆ. 
 
ಮೃತನನ್ನು ಬಾಬು ಶೇಖ್(50) ಎಂದು ಗುರುತಿಸಲಾಗಿದ್ದು, ತಮ್ಮ ಸಾವಿಗೆ ಸೊಸೆ ಮತ್ತು ಆಕೆಯ ಪರಿವಾರದವರೇ ಕಾರಣ ಎಂದು ಅವರು ಆರೋಪಿಸಿದ್ದಾರೆ. 
 
ಘಟನೆ ವಿವರ: ಶೇಖ್ ಅವರ ಮಗನಿಗೆ ಕಳೆದ ವರ್ಷದಂತ್ಯದಲ್ಲಿ ವಿವಾಹವಾಗಿತ್ತು. ಸೊಸೆಯ ಜತೆಗೆ ಬಾಬು ಶೇಖ್ ಸಂಬಂಧ ಉತ್ತಮವಾಗಿರಲಿಲ್ಲ. ಮಾವ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದಾಕೆ ಆರೋಪಿಸಿದ್ದಳು. ಆಕೆಯ ತಂದೆ ಮತ್ತು ಸಹೋದರ ಕೂಡ ಇದೇ ಆರೋಪವನ್ನು ಹೇರಿದ್ದರು.
 
ಡಿಸೆಂಬರ್ 22 ರಂದು ಶೇಖ್ ತಮ್ಮ ಕಿರಿಯ ಮಗನಲ್ಲಿ ಮೊಬೈಲ್ ಚಿತ್ರೀಕರಣ ಮಾಡುವುದು ಹೇಗೆಂದು ಕಲಿತುಕೊಂಡು ರಾತ್ರಿ ನಿದ್ರಿಸಲೆಂದು ತಮ್ಮ ಕೊಠಡಿಗೆ ಹೋಗಿದ್ದಾರೆ. ಮುಂಜಾನೆ ಮನೆ ಸದಸ್ಯರು ಕೋಣೆ ಬಾಗಿಲು ಬಡಿದಾಗ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಬಾಗಿಲು ಒಡೆದು ನೋಡಿದಾಗ ಅವರ ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. 
 
ನೇಣು ಹಾಕಿಕೊಳ್ಳುವಾಗ ಮೊಬೈಲ್‌ನ್ನು ವಿಡಿಯೋ ಮೋಡ್‌ನಲ್ಲಿಟ್ಟಿದ್ದ ಅವರು ಎಲ್ಲ ದೃಶ್ಯಾವಳಿ ಚಿತ್ರೀಕರಣವಾಗುವಂತೆ ಮಾಡಿದ್ದಾರೆ.
 
ಘಟನೆಗೆ ಸಂಬಂಧಿಸಿದಂತೆ ಮೃತರ ಕಿರಿಯ ಪುತ್ರ ಅಬ್ದುಲ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದರ ಆಧಾರದ ಮೇಲೆ ಶೇಖ್ ಸೊಸೆ ಮತ್ತು ಆಕೆಯ ಪರಿವಾರದವರ ಮೇಲೆ ಭಾರತೀಯ ದಂಡ ಸಂಹಿತೆಯ ವಿಧಿ 306ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೆ ಯಾರ ಬಂಧನವಾಗಿಲ್ಲ.
 
ತನ್ನ ತಂದೆಯ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಅಬ್ದುಲ್ಲ, ನನ್ನ ಅಣ್ಣ ಪತ್ನಿಗೆ ನೀನು ತಂದೆಯವರನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವೆ ಎಂದು ಎಷ್ಟೋ ಸಲ ಮನವರಿಕೆ ಮಾಡಿಸಲು ಪ್ರಯತ್ನಿಸಿದ್ದರು, ಆದರೆ ಆಕೆ ತಂದೆಯವರಿಗೆ ಕಿರುಕುಳ ನೀಡುವುದನ್ನು ಮುಂದುವರೆಸಿದ್ದಳು. ಇದರಿಂದ ನೊಂದಿದ್ದ ನನ್ನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾನೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕೇವಲ ರೂ.20ಕ್ಕೆ ಲೆಕ್ಕವಿಲ್ಲದಷ್ಟು ಸಿನಿಮಾ ನೋಡ್ಬೋದು!