Webdunia - Bharat's app for daily news and videos

Install App

ಸಾಮೂಹಿಕ ಅತ್ಯಾಚಾರಕ್ಕೆ ಯತ್ನ, ವೈದ್ಯನ ಖಾಸಗಿ ಅಂಗವನ್ನೇ ಕತ್ತರಿಸಿದ ನರ್ಸ್‌

Sampriya
ಶುಕ್ರವಾರ, 13 ಸೆಪ್ಟಂಬರ್ 2024 (16:04 IST)
ಬಿಹಾರ: ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯ ಮತ್ತು ಆತನ  ಇಬ್ಬರು ಸಹಚರರು ಸಾಮೂಹಿಕ ಅತ್ಯಾಚಾರ ಎಸಗಲು ಯತ್ನಿಸಿದಾಗ ನರ್ಸ್ ಒಬ್ಬರು ಸರ್ಜಿಕಲ್ ಬ್ಲೇಡ್‌ನಿಂದ ಇರಿದ ಘಟನೆ ನಡೆದಿದೆ. ಬಿಹಾರದ ಸಮಸ್ತಿಪುರದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡಿರುವ ವೈದ್ಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ಸಂಜಯ್ ಕುಮಾರ್ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೇಗುಸರಾಯ್ ಜಿಲ್ಲೆಯ ಡಾ ಸಂಜಯ್ ಕುಮಾರ್ ಸಂಜು, ವೈಶಾಲಿ ಜಿಲ್ಲೆಯ ಸುನೀಲ್ ಕುಮಾರ್ ಗುಪ್ತಾ ಮತ್ತು ಮಾಂಗ್ರಾ ಪ್ರದೇಶದ ಅವಧೇಶ್ ಕುಮಾರ್ ಅತ್ಯಾಚಾರ ಎಸಗಲು ಯತ್ನಿಸಿದ  ಆರೋಪಿಗಳು.


ಮೂವರು ಮದ್ಯ ಸೇವಿಸಿ, ಕುಡಿದ ಅಮಲಿನಲ್ಲಿ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು. ಸಂಜು ತನ್ನ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದಾಗ ಮಹಿಳೆ ಸರ್ಜಿಕಲ್ ಬ್ಲೇಡ್ ಹಿಡಿದು ಆತನ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ.

ಬಳಿಕ ಆಕೆ ಆವರಣದಿಂದ ಪರಾರಿಯಾಗಿದ್ದಳು. ನಂತರ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಎಸ್ಪಿ ವಿನಯ್ ತಿವಾರಿ ನೇತೃತ್ವದ ತಂಡ ಆಸ್ಪತ್ರೆಯಿಂದ ವೈದ್ಯರು ಮತ್ತು ಸಹಚರರನ್ನು ಬಂಧಿಸಿದ್ದಾರೆ.

ಆಸ್ಪತ್ರೆಯಲ್ಲಿ ರಕ್ತಸಿಕ್ತ ಬೆಡ್‌ಶೀಟ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಮದ್ಯದ ಬಾಟಲಿಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

Bakrid: ಅಲ್ಲಾಹನಿಗಾಗಿ ಕತ್ತು ಸೀಳಿಕೊಂಡು ದೇಹತ್ಯಾಗ ಮಾಡಿದ ವ್ಯಕ್ತಿ

Bengaluru: ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆ, ಆರೋಪಿಗಳ ಬಾಯಿಂದ್ದ ಬೆಚ್ಚಿಬೀಳಿಸುವ ಮಾಹಿತಿ ಹೊರಕ್ಕೆ

Covid 19: ದೇಶದಲ್ಲಿ ಏರುತ್ತಲೇ ಇದೆ ಕೋವಿಡ್ 19 ಪ್ರಕರಣಗಳು, ಸಕ್ರಿಯ ಪ್ರಕರಣಗಳ ಸಂಖ್ಯೆ ಹೀಗಿದೆ

Chitradurga Renukaswamy: ಹತ್ಯೆಯಾಗಿ ಇಂದಿಗೆ ಒಂದು ವರ್ಷ, ಪೂಜೆ ಸಲ್ಲಿಸಿದ ಕುಟುಂಬಸ್ಥರು

ಮುಂದಿನ ಸುದ್ದಿ
Show comments