ನೋಟು ಬ್ಯಾನ್ನಿಂದ ಬಸವಳಿದು ಹೋಗಿದ್ದ ಶ್ರೀಸಾಮಾನ್ಯರಿಗೊಂದು ಸಿಹಿಸುದ್ದಿ. ಭಾರತೀಯ ರಿಸರ್ವ್ ಬ್ಯಾಂಕ್ ವಾರದ ಮಿತಿಯನ್ನು 24ಸಾವಿರದಿಂದ 50ಸಾವಿರಕ್ಕೆ ಏರಿಕೆ ಮಾಡಿದೆ.
ಫೆಬ್ರವರಿ 20ರಿಂದ ಇದು ಜಾರಿಗೆ ಬರಲಿದ್ದು, ಮಾರ್ಚ್ 13ರ ನಂತರ ವಾರದ ಮಿತಿಯನ್ನು ಸಂಪೂರ್ಣವಾಗಿ ಹಿಂತೆಗೆತೆದುಕೊಳ್ಳುವುದಾಗಿ ಆರ್ಬಿಐ ತಿಳಿಸಿದೆ.
ಈ ಹಿಂದೆ ಚಾಲ್ತಿ ಖಾತೆದಾರರು ಮಾತ್ರ ಒಂದು ವಾರಕ್ಕೆ ರೂ. 50,000 ನಗದು ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬಹುದಾಗಿತ್ತು.