Select Your Language

Notifications

webdunia
webdunia
webdunia
webdunia

ಸರ್ಕಾರಿ ಆಸ್ಪತ್ರೆಗಳಲ್ಲಿ ಜ್ಯೋತಿಷ್ಯ ಹೇಳುತ್ತಾರೆ.. ವೈದ್ಯರ ರೀತಿಯೇ ಇನ್ಮುಂದೆ ಜ್ಯೋತಿಷಿಗಳೂ ಸಿಗ್ತಾರೆ..!

ಸರ್ಕಾರಿ ಆಸ್ಪತ್ರೆಗಳಲ್ಲಿ ಜ್ಯೋತಿಷ್ಯ ಹೇಳುತ್ತಾರೆ.. ವೈದ್ಯರ ರೀತಿಯೇ ಇನ್ಮುಂದೆ ಜ್ಯೋತಿಷಿಗಳೂ ಸಿಗ್ತಾರೆ..!
ಭೋಪಾಲ್ , ಸೋಮವಾರ, 17 ಜುಲೈ 2017 (11:07 IST)
ವಿಚಿತ್ರ ಬೆಳವಣಿಗೆಯೊಂದರಲ್ಲಿ ಮಧ್ಯಪ್ರದೇಶ ಸರ್ಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಿಗೆ ಜ್ಯೋತಿಷಿಗಳ ಮೂಲಕ ಜಾತಕದ ಸಲಹೆ ಸೂಚನೆ ನೀಡುವ ಸೇವೆ ಒದಗಿಸಲು ಮುಂದಾಗಿದೆ. ಜ್ಯೋತಿಷಿಗಳು, ವಾಸ್ತು ತಜ್ಞರು, ಹಸ್ತಜ್ಞಾನಿಗಳು ಮತ್ತು ಸಂಖ್ಯಾಶಾಸ್ತ್ರಜ್ಞರನ್ನ ಆಸ್ಪತ್ರೆಗೆ ನೇಮಿಸಲು ಸರ್ಕಾರ ಮುಂದಾಗಿದೆ.

ಸೆಪ್ಟೆಂಬರ್`ನಿಂದ ಮಧ್ಯಪ್ರಧೇಶದ ಸರ್ಕಾರಿ ಆಸ್ಪಯತ್ರೆಗಳಲ್ಲಿ ಜಯೋತಿಷಿಗಳ ಸೇವೆ ಆರಂಭವಾಗಲಿದ್ದು, ವಾರಕ್ಕೆರಡು ಬಾರಿ 3ರಿಂದ 4ಗಂಟೆಗಳ ರೋಗಿಗಳಿಗೆ ಜಾತಕ ನೋಡಿ ಅವರ ರೋಗ, ಅವರ ಜಾತಕಫಲದ ಮೇಲೆ ಸಲಹೆ ಸೂಚನೆಗಳನ್ನ ನೀಡಲಾಗುತ್ತೆ.

ಭೋಪಾಲ್`ನಲ್ಲಿರುವ ಸರ್ಕಾರಿ ಸ್ವಾಮ್ಯದ ಮಹರ್ಷಿ ಪತಂಜಲಿ ಸಂಸ್ಕೃತ ಸಂಸ್ಥಾನದ ಮೂಲಕ ಜ್ಯೋತಿಷಿಗಳು ನೇಮಕಗೊಳ್ಳಲಿದ್ದಾರೆ. ಹಿರಿ ಮತ್ತು ಕಿರಿಯ ಶ್ರೇಣಿಯ ಜ್ಯೋತಿಷಿಗಳನ್ನ ನೇಮಿಸಲಾಗುತ್ತೆ. ಹಿರಿಯ ಜ್ಯೋತಿಷಿಗಳ ಮಾರ್ಗದರ್ಶನದಲ್ಲಿ ಹೊರ ರೋಗಿಗಳ ವಿಭಾಗದಲ್ಲಿ ಕಿರಿಯ ಜ್ಯೋತಿಷಿಗಳ ಕೆಲಸ ನಿರ್ವಹಿಸಲಿದ್ದಾರೆ. ಜ್ಯೋತಿಷಿಗಳ ಸಂದರ್ಶನಕ್ಕಾಗಿ ರೋಗಿಗಳು 5 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ ಎನ್ನುತ್ತಾರೆ ಎಂಪಿಎಸ್ಎಸ್ ನಿರ್ದೇಶಕ ಪಿ.ಆರ್. ತಿವಾರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಹೆಲ್ಮೆಟ್ ಹಾಕಿ ಕೆಲಸ ಮಾಡುವ ಸರ್ಕಾರಿ ಅಧಿಕಾರಿಗಳು! ಕಾರಣವೇನು ಗೊತ್ತಾ?!