Select Your Language

Notifications

webdunia
webdunia
webdunia
webdunia

4 ಜಿ ಸ್ಮಾರ್ಟ್‌ಫೋನ್ ಬಳಕೆ; ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಆಸಾರಾಮ್ ಬಾಪು

4 ಜಿ ಸ್ಮಾರ್ಟ್‌ಫೋನ್ ಬಳಕೆ; ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಆಸಾರಾಮ್ ಬಾಪು
ಜೋಧ್ಪುರ್ , ಶುಕ್ರವಾರ, 26 ಆಗಸ್ಟ್ 2016 (10:58 IST)
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಜೈಲುಪಾಲಾಗಿರುವ ಸ್ವಯಂಘೋಷಿತ ದೇವಮಾನವ ಜೈಲಿನಲ್ಲಿ 4 ಜಿ ಸ್ಮಾರ್ಟ್‌ಫೋನ್ ಬಳಸಿ ಸಿಕ್ಕಿ ಹಾಕಿಕೊಂಡಿದ್ದಾರೆ. ಜೈಲಿನ ಗಾರ್ಡ್ ಜೈರಾಮ್ ನಸುಕಿನ ಜಾವದಲ್ಲಿ ಗಸ್ತು ತಿರುಗುವಾಗ ಆಸಾರಾಂ ಫೋನಿನಲ್ಲಿ ಮಾತನ್ನಾಡುತ್ತಿರುವುದು ಪತ್ತೆಯಾಗಿದೆ.

ತಕ್ಷಣ ಅವರ ಕೈಯ್ಯಲ್ಲಿದ್ದ ಫೋನ್ ಕಸಿದುಕೊಂಡ ಜೈರಾಮ್ ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.
 
ಈ ಕುರಿತು ಯಾರ ಬಳಿಯೂ ಮಾತನಾಡಬೇಡ ಎಂದು ಜೈಲು ಅಧಿಕಾರಿಗಳು ಜೈರಾಮ್ ಅವರಿಗೆ ಖಡಕ್ ಆಗಿ ಹೇಳಿದ್ದರೂ ವಿಷಯ ಮಾಧ್ಯಮಗಳಿಗೆ ಸೋರಿಕೆಯಾಗಿದೆ.
 
ಜೈಲು ಕೈಪಿಡಿಯ ಉಲ್ಲಂಘನೆಯ ಬಗ್ಗೆ ಜೈಲ್ ಸೂಪರಿಂಟೆಂಡೆಂಟ್ ವಿಕ್ರಮ್ ಸಿಂಗ್ ಅವರನ್ನು ಪ್ರಶ್ನಿಸಲಾಗಿ, ಈ ಕುರಿತು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಆ ಸಂದರ್ಭದಲ್ಲಿ ನಾನು ನಗರದಲ್ಲಿರಲಿಲ್ಲ ಎಂದು ಹೇಳಿದ್ದಾರೆ. ಜೈಲಿನ ಇತರ ಅಧಿಕಾರಿಗಳು ಸಹ ಮೊಬೈಲ್ ಸ್ವಿಚ್ಡ ಆಪ್ ಮಾಡಿಕೊಂಡಿದ್ದು ಮಾಧ್ಯಮಗಳ ಕೈಗೆ ಸಿಗುತ್ತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

Share this Story:

Follow Webdunia kannada

ಮುಂದಿನ ಸುದ್ದಿ

ಸೇನೆ ವಿರುದ್ಧ ಘೋಷಣೆ: ಅನಗತ್ಯ ರಾಜಕೀಯ ಎಂದ ಕಾಗೋಡು