ಸಿಂಧೂರ ಸಿಡಿಮದ್ದಾಗಿ, ಪಾಕಿಸ್ತಾನದ ಮಂಡಿಯೂರಿಸಿದೆ: ಪ್ರಧಾನಿ ಮೋದಿ ಮಾತು

Sampriya
ಗುರುವಾರ, 22 ಮೇ 2025 (16:57 IST)
ರಾಜಸ್ಥಾನ್‌: ಆಪರೇಷನ್ ಸಿಂಧೂರ್  ಮೂಲಕ ಭಾರತೀಯ ಸಶಸ್ತ್ರ ಪಡೆ, ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿದ್ದು, ಸಿಂಧೂರ್ (ಸಿಂಧೂರ) ಗನ್‌ಪೌಡರ್‌ಗೆ ತಿರುಗಿದಾಗ ಏನಾಗುತ್ತದೆ ಎಂಬುದನ್ನು ಜಗತ್ತು ಮತ್ತು ದೇಶದ ಶತ್ರುಗಳು  ಈಗ ನೋಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಈಚೆಗೆ ಪಾಕಿಸ್ತಾನದ ದಾಳಿಗೆ ಒಳಗಾದ ಬಿಕಾನೇರ್‌ನಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು,  ಏಪ್ರಿಲ್ 22 ರಂದು ಭಯೋತ್ಪಾದಕರು ಧರ್ಮವನ್ನು (ಪಹಗಾಂ ಸಂತ್ರಸ್ತರನ್ನು ಶೂಟ್ ಮಾಡುವ ಮೊದಲು) ನಮ್ಮ ಸಹೋದರಿಯರ ಸಿಂಧೂರವನ್ನು ಧ್ವಂಸ ಮಾಡಿದರು. ದೇಶವು ಒಗ್ಗೂಡಿ ನಾವು ಭಯೋತ್ಪಾದಕರನ್ನು ನಾಶಪಡಿಸುತ್ತೇವೆ ಮತ್ತು ಅವರಿಗೆ ಕಲ್ಪನೆಗೂ ಮೀರಿದ ಶಿಕ್ಷೆಯನ್ನು ನೀಡುತ್ತೇವೆ ಎಂದು ಪ್ರತಿಜ್ಞೆ ಮಾಡಿದೆವು.

"ಇಂದು, ನಿಮ್ಮ ಆಶೀರ್ವಾದ ಮತ್ತು ದೇಶದ ಸಶಸ್ತ್ರ ಪಡೆಗಳ ಶೌರ್ಯದೊಂದಿಗೆ, ನಾವು ಆ ಭರವಸೆಯನ್ನು ಪೂರೈಸಿದ್ದೇವೆ. ನಮ್ಮ ಸರ್ಕಾರವು ಎಲ್ಲಾ ಮೂರು ಪಡೆಗಳಿಗೆ ಮುಕ್ತ ಹಸ್ತವನ್ನು ನೀಡಿದೆ. ಮತ್ತು ಮೂರು ಸೇನೆಗಳು ಒಟ್ಟಾಗಿ ಅಂತಹ ಚಕ್ರವ್ಯೂಹವನ್ನು (ವೆಬ್) ರಚಿಸಿದವು, ಇದರಿಂದ ಇಂದು ಪಾಕಿಸ್ತಾನ ಮಂಡಿಯೂರಿದೆ ಎಂದರು.

ಆಪರೇಷನ್ ಸಿಂಧೂರ್‌ ಬಗ್ಗೆ ಮಾತನಾಡಿದ ಅವರು, ನಮ್ಮ ಗರಂ ಸಿಂಧೂರ್ ಈಗ ಅವರ ರಕ್ತನಾಳಗಳಲ್ಲಿ ಹರಿಯುತ್ತಿದೆ .  ಪಾಕಿಸ್ತಾನದ ಮೇಲೆ ಪ್ರತೀಕಾರವು  "ನ್ಯಾಯದ ಹೊಸ ರೂಪ". ಇನ್ಮುಂದೆ ಪಾಕಿಸ್ತಾನದೊಂದಿಗೆ ಯಾವುದೇ ವ್ಯಾಪಾರ ಅಥವಾ ಮಾತುಕತೆ ನಡೆಸುವುದಿಲ್ಲ ಎಂದು ಒತ್ತಿ ಹೇಳಿದರು.

ಪ್ರತಿ ಭಯೋತ್ಪಾದಕ ದಾಳಿಗೆ ಭಾರತದಂದ ತಕ್ಕ ಪ್ರತ್ಯುತ್ತರ ಇರುತ್ತದೆ; ಭಾರತವು ಪರಮಾಣು ಬಾಂಬ್ ಬೆದರಿಕೆಯಿಂದ ಹೆದರುವುದಿಲ್ಲ ಎಂದು; ಮತ್ತು ಭಾರತವು ಪಾಕಿಸ್ತಾನದ "ರಾಜ್ಯ ಮತ್ತು ರಾಜ್ಯೇತರ ನಟರನ್ನು" ಒಂದಾಗಿ ನೋಡುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರದಲ್ಲಿ ಕೇವಲ 2 ಸ್ಥಾನದಲ್ಲಿ ಮುನ್ನಡೆ, ರಾಹುಲ್ ಗಾಂಧಿಗೆ ಇದು 95 ನೇ ಸೋಲು

ಬಿಜೆಪಿಗೆ ನೆಹರೂ, ಗಾಂಧೀಜಿಯನ್ನು ತೆಗಳುವುದೇ ಕೆಲಸ: ಸಿದ್ದರಾಮಯ್ಯ

ಬಿಹಾರ ಚುನಾವಣೆ ಗೆದ್ದಿದ್ದಕ್ಕೆ ಲಾಡು ಹಂಚಿ ಥಕಥೈ ಕುಣಿದ ಕರ್ನಾಟಕ ಬಿಜೆಪಿ ನಾಯಕರು

ನವಂಬರ್ 18 ಕ್ಕೆ ಪ್ರಮಾಣವಚನ ಮಾಡ್ತೀನಿ ಎಂದಿದ್ದ ತೇಜಸ್ವಿ ಯಾದವ್ ಗೆ ಸೋಲಾಗಲು ತಂದೆಯೇ ಕಾರಣನಾ

Bihar Election result 2025: ಬಿಹಾರದ ಇಂದಿನ ಫಲಿತಾಂಶವನ್ನು ಮೊದಲೇ ಭವಿಷ್ಯ ನುಡಿದಿದ್ದ ಅಮಿತ್ ಶಾ video

ಮುಂದಿನ ಸುದ್ದಿ
Show comments