Select Your Language

Notifications

webdunia
webdunia
webdunia
webdunia

ಅರವಿಂದ್ ಕೇಜ್ರಿವಾಲ್ ಆರೋಗ್ಯ ಉತ್ತಮವಾಗಿದೆ: ಏಮ್ಸ್‌ ತಜ್ಞರ ತಂಡ

Aravindh

Sampriya

ನವದೆಹಲಿ , ಶನಿವಾರ, 27 ಏಪ್ರಿಲ್ 2024 (20:25 IST)
ನವದೆಹಲಿ: ಅಕ್ರಮ ಹಣ ವರ್ಗಾವಣೆ ಸಂಬಂಧ ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯವಾಗಿದ್ದು, ಈಗಾಗಲೇ ನೀಡುತ್ತಿರುವ ಜೌಷಧಿಯನ್ನು ಮುಂದುವರೆಸುವಂತೆ ಏಮ್ಸ್‌ ತಜ್ಞರ ತಂಡ ಸಲಹೆ ನೀಡಿದೆ.

ದೆಹಲಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ರಚಿಸಲಾದ ಐದು ಸದಸ್ಯರ ವೈದ್ಯಕೀಯ ಮಂಡಳಿಯು ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯ ತಪಾಸಣೆ ನಡೆಸಿದೆ.

ಈ ವಿಡಿಯೋ ಕಾನ್ಪರೆನ್ಸ್‌ನಲ್ಲಿ ತಿಹಾರ್ ಜೈಲಿನ ಇಬ್ಬರು ವೈದ್ಯರು ಕೂಡ ಭಾಗವಹಿಸಿದ್ದರು.

ಅರ್ಧ ಗಂಟೆಗಳ ಕಾಲ ನಡೆದ ತಪಾಸಣೆಯಲ್ಲಿ ಅವರ ಆರೋಗ್ಯ ಉತ್ತಮವಾಗಿದ್ದು, ಈಗಾಗಲೇ ನೀಡುತ್ತಿರುವ ಜೌಷಧಿಯನ್ನು ಮುಂದುವರೆಸುವಂತೆ ಸೂಚಿಸಿದ್ದಾರೆ. ‌

ಇನ್ನೂ ಅರವಿಂದ್ ಕೇಜ್ರಿವಾಲ್ ಅವರು ಬಂಧನ ನಂತರ ಅವರ ಆರೋಗ್ಯದ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು. ಜಾಮೀನು ಪಡೆಯುವ ಉದ್ದೇಶದಿಂದ ಕೇಜ್ರಿವಾಲ್ ಅವರ ಆರೋಗ್ಯದ ಬಗ್ಗೆ ಆ್ಯಪ್ ಪಕ್ಷದ ನಾಯಕರು ಆರೋಪ ಮಾಡಿದ್ದರು ಎಂದು ಹೇಳಲಾಗಿತ್ತು. ಈ ಕುರಿತಂತೆ ಇದೀಗ ಏಮ್ಸ್​ ಮೆಡಿಕಲ್ ಬೋರ್ಡ್​ ಹೊಸ ಮಾಹಿತಿ ಹಂಚಿಕೊಳ್ಳುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೇಹಾ ಹತ್ಯೆ ಆರೋಪಿ ಫಯಾಜ್‌ನ ರಕ್ತದ ಮಾದರಿ ಸಂಗ್ರಹಿಸಿದ ಅಧಿಕಾರಿಗಳು