Select Your Language

Notifications

webdunia
webdunia
webdunia
webdunia

ಮೃತ ಯೋಧನ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ಘೋಷಿಸಿದ ಅರವಿಂದ್ ಕೇಜ್ರಿವಾಲ್

ಮೃತ ಯೋಧನ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ಘೋಷಿಸಿದ ಅರವಿಂದ್ ಕೇಜ್ರಿವಾಲ್
ಭಿವಾನಿ(ಹರಿಯಾಣಾ) , ಗುರುವಾರ, 3 ನವೆಂಬರ್ 2016 (20:18 IST)
ಒಆರ್‌ಒಪಿ ಜಾರಿಗೊಳಿಸುವಂತೆ ಒತ್ತಾಯಿಸಿ ಆತ್ಮಹತ್ಯೆಗೆ ಶರಣಾಗಿದ್ದ ನಿವೃತ್ತ ಯೋಧನ ಕುಟುಂಬಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 1 ಕೋಟಿ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ.
 
ಹುತಾತ್ಮನೆಂದು ನಾವು ಕರೆಯುವ ರಾಮಕಿಶನ್ ಗೆರ್ವಾಲ್ ಕುಟುಂಬಕ್ಕೆ 1 ಕೋಟಿ ರೂ ಹಣಕಾಸಿನ ನೆರವು ನೀಡಲಾಗುವುದು ಎಂದು ಕುಟುಂಬದ ಸದಸ್ಯರ ಮುಂದೆ ಕೇಜ್ರಿವಾಲ್ ಘೋಷಿಸಿದರು.  
 
ದೇಶಕ್ಕಾಗಿ ಬದುಕ್ಕಿದ್ದೆ ದೇಶಕ್ಕಾಗಿ ಸಾವನ್ನಪ್ಪುತ್ತಿದ್ದೇನೆ ಎನ್ನುವ ನಿವೃತ್ತ ಯೋಧ ರಾಮಕಿಶನ್ ಗೆರ್ವಾಲ್ ಅವರ ಹೇಳಿಕೆ ಯಾವುದೇ ಹುತಾತ್ಮ ಯೋಧನಿಗಿಂತ ಕಡಿಮೆಯಲ್ಲ ಎಂದು ತಿಳಿಸಿದ್ದಾರೆ. 
 
ಇದೀಗ ಸಂಪೂರ್ಣ ದೇಶವೇ ಒಆರ್‌ಒಪಿ ಜಾರಿಗೊಳಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದೆ. ನಾವು ಕೂಡಾ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತೇವೆ ಎಂದು ಹೇಳಿದ್ದಾರೆ.
 
ನಿನ್ನೆ ನಿವೃತ್ತ ಯೋಧ ರಾಮಕಿಶನ್ ಗೆರ್ವಾಲ್ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತೆರಳಿದ್ದಾಗ ದೆಹಲಿ ಪೊಲೀಸರು ಅವರನ್ನು ಬಂಧಿಸಿ ಏಳು ಗಂಟೆಗಳ ಕಾಲ ಬಂಧನಕ್ಕೊಳಗಾಗಿಸಿತ್ತು.  
 
ಆತ್ಮಹತ್ಯೆಗೆ ಶರಣಾದ ನಿವೃತ್ತ ಯೋಧನ ಪುತ್ರ ಜಸ್ವಂತ್ ಮಾತನಾಡಿ, ದೆಹಲಿ ಪೊಲೀಸರು ಅಸಭ್ಯವಾಗಿ ವರ್ತಿಸಿದ್ದಲ್ಲದೇ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನ ಎನ್ನುವಂತಾಗಬೇಕು :ಯಡಿಯೂರಪ್ಪ