Select Your Language

Notifications

webdunia
webdunia
webdunia
webdunia

ಇವಿಎಂ ವಿಷಯ ಪ್ರಸ್ತಾಪಿಸದೇ ಬಿಜೆಪಿಯನ್ನ ಅಭಿನಂದಿಸಿದ ಕೇಜ್ರಿವಾಲ್

ಇವಿಎಂ ವಿಷಯ ಪ್ರಸ್ತಾಪಿಸದೇ ಬಿಜೆಪಿಯನ್ನ ಅಭಿನಂದಿಸಿದ ಕೇಜ್ರಿವಾಲ್
ನವದೆಹಲಿ , ಬುಧವಾರ, 26 ಏಪ್ರಿಲ್ 2017 (23:39 IST)
ದೆಹಲಿಯ ಮೂರೂ ಪಾಲಿಕೆಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಭಿನಂದನೆ ಸಲ್ಲಿಸಿದ್ದಾರೆ. ಟ್ವಿಟ್ಟರ್`ನಲ್ಲಿ ಅಭಿನಂದಿಸಿದ ಕೇಜ್ರಿವಾಲ್, ಇವಿಎಂ ದೋಷದ ವಿಷಯವನ್ನು ಮಾತ್ರ ಪ್ರಸ್ತಾಪಿಸಲಿಲ್ಲ. ಬಿಜೆಪಿ ಜೊತೆ ಸೇರಿ ದೆಹಲಿಯ ಏಳಿಗೆಗಾಗಿ ಕೆಲಸ ಮಾಡುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.

ಇದಕ್ಕೂ ಮುನ್ನ ಬಿಜೆಪಿ ಗೆಲುವಿಗೆ ಇವಿಎಂ ದೋಷ ಕಾರಣ ಎಂದು ಆಮ್ ಆದ್ಮಿಯ ನಾಯಕರು ಪುಂಖಾನುಪುಂಖವಾಗಿ ಆರೋಪ ಮಾಡಿದ್ದರು. ಇದು ಮೋದಿ ಅಲೆಯಲ್ಲ, ಇವಿಎಂ ಅಲೆ ಎಂದು ದೆಹಲಿಯ ಕಾರ್ಮಿಕ ಸಚಿವ ಗೋಪಾಲ್ ರಾಯ್ ಆರೋಪ ಅಣಕ ಮಾಡಿದ್ದರು.
.
ಮತ್ತೊಬ್ಬ ಆಪ್ ನಾಯಕ ಅಶುತೋಷ್, ಬಹುತೇಕ ಇವಿಎಂಗಳು ಅಸಮರ್ಪಕವಾಗಿದ್ದವು. ದೆಹಲಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸುಧಾರಣೆಗೆ ಆಮ್ ಆದ್ಮಿ ಇಷ್ಟೊಂದು ಕೆಲಸ ಮಾಡಿರುವಾಗ ಬಿಜೆಪಿಗೆ ಅಷ್ಟು ಮತಗಳು ಹೋಗಲು ಸಾಧ್ಯವಿಲ್ಲ’ ಎಂದಿದ್ದರು.

ಈ  ಆದ್ಮಿ ಪಕ್ಷದ ನಾಯಕರು ತುಂಬಾ ಸಗಬಗ್ಗೆ ಪ್ರತಿಕ್ರಿಸಿದ್ದ ಬಿಜೆಪಿ ಮುಖಂಡ ವಿಜಯ್ ಗೋಯೆಲ್, ಆಮ್ ಆದ್ಮಿ ನಾಯಕರು ತುಂಬಾ ಸ್ಪಷ್ಟವಾಗಿದ್ದಾರೆ. ಅವರು ಗೆದ್ದರೆ ಇವಿಎಂ ಉತ್ತಮವಾಗಿರುತ್ತವೆ. ಸೋತರೆ ಇವಿಎಂ ದೋಷ ಎಂದು ವ್ಯಂಗ್ಯವಾಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್ಬುಕ್, ಟ್ವಿಟ್ಟರ್, ವಾಟ್ಸಾಪ್ ಸೇರಿದಂತೆ 22 ಸಾಮಾಜಿಕ ಮಾಧ್ಯಮಗಳಿಗೆ ನಿಷೇಧ