Select Your Language

Notifications

webdunia
webdunia
webdunia
webdunia

ಹೆಲಿಕಾಪ್ಟರ್ ಹತ್ತುವಾಗ ಜಾರಿಬಿದ್ದು ಗಾಯಗೊಂಡ ಜೇಟ್ಲಿ

Arun Jaitley bjp
ನವದೆಹಲಿ( , ಸೋಮವಾರ, 13 ಮಾರ್ಚ್ 2017 (11:01 IST)
ನವದೆಹಲಿ(ಮಾ.13): ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೆಲಿಕಾಪ್ಟರ್ ಹತ್ತುವಾಗ ಕಾಲು ಜ಻ರಿಬಿದ್ದು ಗಾಯಗೊಂಡಿರುವ ಘಟನೆ ಭಾನುವಾರ ಹರಿದ್ವಾರದಲ್ಲಿ ನಡೆದಿದೆ.

ಬಾಬಾ ರಾಮದೇವ್ ಪತಂಜಲಿ ಯೋಗ ಪೀಠಕ್ಕೆ ಭೇಟಿ ನೀಡಿದ್ದ ಜೇಟ್ಲಿ ವಾಪಸ್ ನವದೆಹಲಿಗೆ ಹಿಂದಿರುಗಲು ಹೆಲಿಕಾಪ್ಟರ್ ಹತ್ತುವಾಗ ಕಾಲು ಜಾರಿದ್ದರಿಂದ ಕುಸಿ ಬಿದ್ದಿದ್ದಾರೆ. ಸಮೀಪದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಸಣ್ಣ ಗಾಯವಾಗಿದೆ. ಅದೇ ಹೆಲಿಕಾಪ್ಟರ್`ನಲ್ಲಿ ಜೇಟ್ಲಿ ತೆರಳಿದರು ಎಂದು ಪತಂಜಲಿ ಯೋಗಪೀಠದ ಸಿಬ್ಬಂದಿ ತಿಳಿಸಿದ್ದಾರೆ.

ಉತ್ತರಪ್ರದೇಶ ಮತ್ತು ಉತ್ತರಾಖಂಡ್`ನಲ್ಲಿ ನೂತನ ಸಿಎಂ ಆಯ್ಕೆ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಆಯೋಜಿಸಿದ್ದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಭಾಗವಹಿಸಲು ಅರುಣ್ ಜೇಟ್ಲಿ ತರಾತುರಿಯಲ್ಲಿ ಹೊರಟಿದ್ದರು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನನಗೆ ಕಿರುಕುಳ ನೀಡಲಾಗುತ್ತಿದೆ: ಜಯಲಲಿತಾ ಸೋದರ ಸಂಬಂಧಿ ದೀಪಾ ಆರೋಪ