ಹಣಕೊಡಲಿಲ್ಲವೆಂದು ತಾಯಿಯನ್ನು ಕೊಂದು ಉತ್ತರ ಪ್ರದೇಶದಿಂದ ಹರ್ಯಾಣದವರೆಗೆ ಸೂಟ್ಕೇಸ್ನಲ್ಲಿ ಹೊತ್ತೊಯ್ದ ಆರೋಪದ ಮೇಲೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಹಿಮಾಂಶು ತಾಯಿ ಪ್ರತಿಮಾ ದೇವಿ ಬಳಿ 5 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ.ಆದರೆ ಆಕೆ ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೋಪಗೊಂಡು ತಾಯಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ ದೀಪಕ್ ಭುಕರ್ ಹೇಳಿದ್ದಾರೆ.