Publish Date: Wed, 23 Sep 2015 (17:52 IST)
Updated Date: Wed, 23 Sep 2015 (17:57 IST)
ರಾಜಸ್ಥಾನದ ಜೈಸಲ್ಮರ್ ಜಿಲ್ಲೆಯಲ್ಲಿ ತರಬೇತಿ ಚಟುವಟಿಕೆ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ ಸೇನೆಯ ಮೇಜರ್ ಒಬ್ಬರು ಸತ್ತಿದ್ದಾರೆ. ಮಂಗಳವಾರ ರಾತ್ರಿ 7 ಗಂಟೆಗೆ ಪೋಕ್ರಾನ್ ಜಿಲ್ಲೆಯಲ್ಲಿ ತರಬೇತಿ ಚಟುವಟಿಕೆ ನಡೆಯುತ್ತಿದ್ದಾಗ, ಮೇಜರ್ ಧ್ರುವ ಯಾದವ್ ಆಕಸ್ಮಿಕವಾಗಿ ಹಾರಿದ ಮದ್ದಿನ ಚೂರು ತಾಗಿ ಮೃತಪಟ್ಟಿದ್ದಾರೆ.
ಸುಮಾರು 20ರ ಆಸುಪಾಸಿನಲ್ಲಿದ್ದ ಮೇಜರ್ ದ್ರುವ್ ಯಾದವ್ ಅರ್ಜುನ್ ಟ್ಯಾಂಕ್‌ಗಳನ್ನು ಒಳಗೊಂಡ ಸೇನೆಯ 75ನೇ ಸಶಸ್ತ್ರ ತುಕಡಿ ಒಳಗೊಂಡ ಪ್ರದರ್ಶನದಲ್ಲಿ ಫಿರಂಗಿ ಮದ್ದಿನ ಚೂರು ಅಥವಾ ಟ್ಯಾಂಕ್‌ನಿಂದ ತಪ್ಪಿದ ಗುರಿ ಮೇಜರ್ ಯಾದವ್ ಅವರಿಗೆ ಬಡಿದಿರಬಹುದೆಂದು ಶಂಕಿಸಲಾಗಿದೆ. ಸಾವಿನ ಕಾರಣವನ್ನು ತಿಳಿಯಲು ಶವಪರೀಕ್ಷೆಯನ್ನು ನಿರ್ವಹಿಸಲಾಗಿದ್ದು, ಸೇನೆಯೂ ಪೂರ್ಣ ತನಿಖೆಯನ್ನು ಕೈಗೊಂಡಿದೆ.
ಸಹ ಸೈನಿಕರು ಮೇಜರ್ ಅವರ ಕುತ್ತಿಗೆಯಲ್ಲಿ ನೆತ್ತರು ಒಸರುತ್ತಿರುವ ಬಗ್ಗೆ ತಿಳಿಸುವಷ್ಟರಲ್ಲಿ ಮೇಜರ್ ಗಾಯಗಳಿಂದಾಗಿ ಮರಣವಪ್ಪಿದ್ದರು. ಡೆಹ್ರಾಡನ್ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಬೋಧಕರಾಗಿದ್ದ ಮೇಜರ್ ಯಾದವ್, ಪತ್ನಿ ಮತ್ತು 8 ತಿಂಗಳ ಗರ್ಭಿಣಿ ಪತ್ನಿಯನ್ನು ಅಗಲಿದ್ದಾರೆ.