Select Your Language

Notifications

webdunia
webdunia
webdunia
webdunia

ಭಾರತೀಯ ಸೇನೆಯಲ್ಲಿ ಶಸ್ತ್ರಾಸ್ತ್ರಗಳ ಅಭಾವ: ಯುದ್ಧ ನಡೆದರೆ 10 ದಿನಗಳಲ್ಲಿ ಶಸ್ತ್ರಗಳು ಖಾಲಿ..

ಭಾರತೀಯ ಸೇನೆಯಲ್ಲಿ ಶಸ್ತ್ರಾಸ್ತ್ರಗಳ ಅಭಾವ: ಯುದ್ಧ ನಡೆದರೆ 10 ದಿನಗಳಲ್ಲಿ ಶಸ್ತ್ರಗಳು ಖಾಲಿ..
ನವದೆಹಲಿ , ಶನಿವಾರ, 22 ಜುಲೈ 2017 (14:36 IST)
ನವದೆಹಲಿ:ಒಂದೆಡೆ ಪಾಕಿಸ್ತಾನ ಇನ್ನೊಂದೆಡೆ ಚೀನಾ ದೇಶಗಳು ಗಡಿಯಲ್ಲಿ ಯುದ್ಧೋತ್ಸಾಹದಲ್ಲಿದ್ದು, ಒಂದೊಮ್ಮೆ ಈ ಸಂದರ್ಭದಲ್ಲಿ ಯುದ್ಧವೇನಾದರೂ ನಡೆದರೆ ಭಾರತೀಯ ಸೇನೆಯಲ್ಲಿ ಶಸ್ತ್ರಾಸ್ತ್ರಗಳ ಅಭಾವ ಇದ್ದು, ಶೇ.40ರಷ್ಟು ಶಸ್ತ್ರಾಸ್ತ್ರಗಳ ಕೊರತೆ ಇದೆ ಎಂದು ಮಹಾಲೇಖಪಾಲ(ಸಿಎಜಿ) ವರದಿ ನೀಡಿದೆ.
 
ಅಂದರೆ ಅಕಸ್ಮಾತ್ ಯುದ್ಧ ನಡೆದರೆ ಕೇವಲ ಹತ್ತೇ ದಿನದಲ್ಲಿ ಭಾರತದ ಬಳಿ ಇರುವ ಶಸ್ತ್ರಾಸ್ತ್ರಗಳು ಖಾಲಿಯಾಗುತ್ತವೆ. ಭಾರತೀಯ ಸೇನೆಯ ಬಳಿ ಇರುವ ಶಸ್ತ್ರಾಸ್ತ್ರಗಳ ಬಗ್ಗೆ ಲೆಕ್ಕ ಪರಿಶೋಧನಾ ಸಮಿತಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ವರದಿಯಲ್ಲಿ ಯುದ್ಧ ನಡೆದರೆ ಭಾರತೀಯ ಸೇನೆಗೆ 152 ವಿಧದ ಶಸ್ತ್ರಾಸ್ತ್ರಗಳು ತುರ್ತಾಗಿ  ಬೇಕಾಗುತ್ತದೆ. ಆದರೆ ಈ ಪೈಕಿ 61 ವಿಧದ ಶಸ್ತ್ರಾಸ್ತ್ರಗಳು ಸತತ 10 ದಿನ ಯುದ್ಧ ನಡೆದರೆ ಖಾಲಿಯಾಗುತ್ತವೆ. 31 ವಿಧದ ಶಸ್ತ್ರಾಸ್ತ್ರಗಳ ದಾಸ್ತಾನು ತೃಪ್ತಿದಾಯಕವಾಗಿದೆಯಾದರೂ ಉಳಿದ 60 ವಿಧದ ಶಸ್ತ್ರಾಸ್ತ್ರಗಳ ಪ್ರಮಾಣ ಕಡಿಮೆ  ಪ್ರಮಾಣದಲ್ಲಿವೆ ಎಂದು ತಿಳಿಸಿದೆ.
 
ಯಾವುದೇ ಸಂದರ್ಭದಲ್ಲಿ ಯುದ್ಧ ಘೋಷಣೆಯಾದರೆ ಕನಿಷ್ಠ 20 ದಿನಗಳಿಗಾಗುವಷ್ಟು ಶಸ್ತ್ರಾಸ್ತ್ರ ಸಂಗ್ರಹ ಇರಬೇಕು ಎಂಬ ನಿಯಮವಿದೆ. ಆದರೆ ಈ ನಿಯಮ ಪಾಲನೆಯಾಗಿಲ್ಲ.ಅಲ್ಲದೇ ಸೈನಿಕರ ತರಬೇತಿಗೆಂದು ಕನಿಷ್ಠ 24 ವಿಧದ ಯುದ್ಧ ಸಾಮಗ್ರಿಗಳು ಬೇಕು . ಆದರೆ ಈ ಶಸ್ತ್ರಾಸ್ತ್ರಗಳೂ ಸಹ ಕೇವಲ 5 ದಿನಗಳಿಗೆ ಸಾಕಾಗುವಷ್ಟಿದೆ ಎಂಬುದು ಆತಂಕಕ್ಕೆ ಕಾರಣವಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯವೇ ಬೆಚ್ಚಿಬೀಳಿಸುವ ವಿಕೃತ ಕಾಮಿ ಸೆರೆ