Daily Horoscope

Select Your Language

Notifications

webdunia
webdunia
webdunia
webdunia

ಇಬ್ಬರು ಅಪರಿಚಿತ ಶಸ್ತ್ರಧಾರಿಗಳಿಂದ ಚರ್ಚೆ ಮೇಲೆ ದಾಳಿ: ಬೈಬಲ್ ಸುಟ್ಟು ಹಾಕಿದ ದುರುಳರು

ಚತ್ತೀಸ್‌ಗಢ್ ಚರ್ಚ್
ಚತ್ತೀಸ್‌ಗಢ್‌ನ ಬಸ್ತಾರ್ ಜಿಲ್ಲೆಯ ಕರಂಜಿ ಮಾತಾಗುಡಿ ಪಾರಾ ಗ್ರಾಮದಲ್ಲಿರುವ ಚರ್ಚೆಗೆ ನುಗ್ಗಿದ ಇಬ್ಬರು ಅಪರಿಚಿತ ಸಶಸ್ತ್ರಧಾರಿಗಳು ಕ್ರೈಸ್ತ್ ಧರ್ಮದ ಪವಿತ್ರ ಗ್ರಂಥ ಬೈಬಲ್‌ಗೆ ಬೆಂಕಿ ಹಚ್ಚಿದ ಹೇಯ ಘಟನೆ ವರದಿಯಾಗಿದೆ.
 
ಚರ್ಚ್‌ನ ಪಾದ್ರಿ ದೀನಬಂಧು ಸಮೇಲಿ ಘಟನೆಯ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಚರ್ಚ್‌ಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
 
ನಾವು ಕೂಡಾ ಕ್ರೈಸ್ತರು ದೇವರಲ್ಲಿ ಪ್ರಾರ್ಥನೆ ಮಾಡಬೇಕು ಎಂದು ಚರ್ಚ್‌ ಒಳಗೆ ಬಂದ ಇಬ್ಬರು ಆರೋಪಿಗಳು ಹರಿತವಾದ ಆಯುಧ ತೋರಿಸಿ ಪಾದ್ರಿಯ ಮೇಲೆ ಹಲ್ಲೆ ಮಾಡಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸವಿದೆ ಎಂದು ಬಸ್ತಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‌.ಎನ್.ದಾಶ್ ತಿಳಿಸಿದ್ದಾರೆ.
 
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ದಾಶ್ ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada