Select Your Language

Notifications

webdunia
webdunia
webdunia
webdunia

ನೀವು ಟ್ವಿಟರ್ ನಲ್ಲಿದ್ದೀರಾ..?ಪ್ರಧಾನಿ ಮೋದಿಗೆ ವರದಿಗಾರ್ತಿಯ ಪ್ರಶ್ನೆ

NBC reporter
ನವದೆಹಲಿ , ಶುಕ್ರವಾರ, 2 ಜೂನ್ 2017 (13:13 IST)
ನವದೆಹಲಿ:ಸದಾಕಾಲ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಮೆರಿಕದ ವರದಿಗಾರ್ತಿಯೊಬ್ಬರು ನೀವು ಟ್ವಿಟರ್ ನಲ್ಲಿದ್ದೀರಾ ಎಂಬ ಪ್ರಶ್ನೆಕೇಳಿ ನಗೆಪಾಟಲಿಗೀಡಾಗಿದ್ದಾರೆ.
 
ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನ್ನು ಸಂದರ್ಶನ ಮಾಡಲು ತೆರಳಿದ್ದ ಎನ್ ಬಿಸಿ ವರದಿಗಾರ್ತಿ ಮೆಗಿನ್ ಕೆಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ " ನೀವು ಟ್ವಿಟರ್ ನಲ್ಲಿ ಇದ್ದೀರಾ"? ಎಂದು ಪ್ರಶ್ನಿಸಿದ್ದಾರೆ. ಜರ್ನಲಿಸ್ಟ್‌ ಪ್ರಶ್ನೆಗೆ ಮೋದಿ ನಕ್ಕು ಸುಮ್ಮನಾಗಿದ್ದಾರೆ. 
 
ಜರ್ನಲಿಸ್ಟ್ ಕೆಲ್ಲಿ ಅವರು ಮೋದಿ ಅವರನ್ನು ಪ್ರಶ್ನಿಸುತ್ತಿರುವ ಚಿಕ್ಕ ವಿಡಿಯೋ ತುಣುಕೊಂದನ್ನು ಎನ್‌ಬಿಸಿಯ ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಆಗಿದ್ದು, ಟ್ವಿಟರ್ ಬಳಕೆದಾರರು ಈಗ ಕೆಲ್ಲಿಯ ಕಾಲೆಳೆದು ಕೆಲ್ಲಿಗೆ ಮುಜುಗರಕ್ಕೀಡುಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟ್ರೆಚರ್ ಸಿಗದೇ ಗಂಡನನ್ನ ಎಳೆದೊಯ್ದ ಪತ್ನಿ.. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ