Webdunia - Bharat's app for daily news and videos

Install App

2025ರಲ್ಲಿ ಮತ್ತೇ ಕೋವಿಡ್ 4ನೇ ಅಲೆ ಸ್ಫೋಟ: ಫ್ಯಾಕ್ಟ್‌ಚೆಕ್‌ನಲ್ಲಿ ಅಸಲಿ ಸತ್ಯ ಬಯಲು

Sampriya
ಗುರುವಾರ, 26 ಡಿಸೆಂಬರ್ 2024 (20:21 IST)
Photo Courtesy X
ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ 2025ರ ಜನವರಿ ತಿಂಗಳಲ್ಲಿ ಕೋವಿಡ್ 4ನೇ ಅಲೆ ಸ್ಫೋಟಗೊಳ್ಳಲಿದೆ ಎನ್ನುವ ವಿಡಿಯೋವೊಮದು ವೈರಲ್ ಆಗುತ್ತಿದೆ. ಇದೀಗ ಪಿಟಿಐ ಫ್ಯಾಕ್ಟ್‌ಚೆಕ್ ತನಿಖೆಯಲ್ಲಿ ಈ ವಿಡಿಯೊ ನಕಲಿ ಎಂಬುದು ಗೊತ್ತಾಗಿದೆ. ಈ ವಿಡಿಯೊ 2022ರದ್ದು ಎಂದೂ ಅದು ಹೇಳಿದೆ.

ಹೊಸ ವರ್ಷ 2025ರಲ್ಲಿ ಜಾಗರೂಕರಾಗಿರಿ, ಮತ್ತೆ ಕೊರೊನಾ ಬರಲಿದೆ. ಚೀನಾದಲ್ಲಿ ಪ್ರತಿದಿನ ಸಾವಿರಾರು ಜನರು ಸಾಯುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹರಿ ಬಿಡಲಾಗಿದೆ. ಡಿಸೆಂಬರ್ 17ರಂದು ಫೇಸ್‌ಬುಕ್‌ನ ಹಲವು ಬಳಕೆದಾರರು ಹಂಚಿಕೊಂಡಿದ್ದರು. ಇತ್ತೀಚಿನ ವಿಡಿಯೊ ಎಂಬಂತೆ ಮತ್ತೆ ಕೆಲವರು ಹಂಚಿಕೊಂಡಿದ್ದರು.

ಗೂಗಲ್‌ನಲ್ಲಿ ಕೀವರ್ಡ್ ಹುಡುಕಾಟವನ್ನು ಬಳಸಿಕೊಂಡು ಪಿಟಿಐ ನಡೆಸಿದ ಫ್ಯಾಕ್ಟ್ ಚೆಕ್‌ನಲ್ಲಿ ವಿಡಿಯೊಗೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬರಲಿಲ್ಲ.

ಇದಲ್ಲದೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಿದಾಗ ಭಾರತದಲ್ಲಿ ಕೇವಲ 11 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ. 4ನೇ ಅಲೆ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments