ಭೃಷ್ಟಾಚಾರ ನಿಗ್ರಹ ಹೋರಾಟದೊಂದಿಗೆ ವಿಖ್ಯಾತರಾಗಿರುವ ಗಾಂಧಿವಾದಿ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮತ್ತೆ ಹೋರಾಟಕ್ಕೆ ಇಳಿಯಲಿದ್ದಾರೆ. ಈ ಬಾರಿ ಅವರು ಗುರಿ ಮದ್ಯ ನಿಷೇಧ.
ಮದ್ಯ ಹಾವಳಿ ತಡೆಗೆ ಕಠಿಣ ಕಾನೂನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ತಮ್ಮ ಮುಂದಿನ ಚಳುವಳಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಭಾನುವಾರ ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನ್ನಾಡುತ್ತಿದ್ದ ಅವರು ಮದ್ಯ ಕೌಟುಂಬಿಕ ಜೀವನಕ್ಕೆ ಮುಳುವಾಗಿದೆ. ಇದರ ಹಾವಳಿಯಿಂದ ಪರಿವಾರಗಳು ಅದರಲ್ಲೂ ಮಹಿಳೆಯರು ಸಾಕಷ್ಟು ಸಂಕಷ್ಟಕ್ಕೊಳಗಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕಾಗಿ ತಾವು ಹೋರಾಟಕ್ಕಿಳಿಯುವುದಾಗಿ ಅಣ್ಣಾ ಘೋಷಿಸಿದ್ದಾರೆ.
ಈ ಉದ್ದೇಶ ಸಾಧನೆಗಾಗಿ ಕಠಿಣ ಕಾನೂನಿನ ಅಗತ್ಯವಿದೆ. ಈ ದಿಶೆಯಲ್ಲಿ ತಾವು ಹೋರಾಟ ನಡೆಸುವುದಾಗಿ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ