Webdunia - Bharat's app for daily news and videos

Install App

ಎನ್‌ಡಿ ಟಿವಿ ನಿಷೇಧ: ಇಂದು ಸುಪ್ರೀಂನಲ್ಲಿ ವಿಚಾರಣೆ

Webdunia
ಮಂಗಳವಾರ, 8 ನವೆಂಬರ್ 2016 (11:29 IST)
ಪಠಾಣ್‌ಕೋಟ್  ವಾಯುನೆಲೆ ಮೇಲಿನ ದಾಳಿ ವರದಿ ಪ್ರಸಾರ ಮಾಡಿದ್ದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೇರಿರುವ ಒಂದು ದಿನದ ನಿಷೇಧ ಪ್ರಶ್ನಿಸಿ ಖಾಸಗಿ ಸುದ್ದಿ ವಾಹಿನಿ ಸೋಮವಾರ ಎನ್‌ಡಿ ಟಿವಿ ಸುಪ್ರೀಂ ಮೆಟ್ಟಿಲೇರಿದೆ. ಇಂದು ಸುಪ್ರೀಂ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಪಠಾಣ್ ಕೋಟ್ ಉಗ್ರರ ದಾಳಿ ಸಂದರ್ಭದ ಸೂಕ್ಷ್ಮ ವಿಚಾರಗಳನ್ನು ಬಿತ್ತರಿಸಿ, ಪ್ರಸಾರ ನಿಯಮ ಉಲ್ಲಂಘಿಸಿದ ಆರೋಪದಡಿ ನವೆಂಬರ್ 9ರ ಮಧ್ಯರಾತ್ರಿಯಿಂದ ನವೆಂಬರ್ 10ರ ಮಧ್ಯರಾತ್ರಿಯವರೆಗೆ 24ಗಂಟೆ ಯಾವುದೇ ಕಾರ್ಯಕ್ರಮ, ಸುದ್ದಿ ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರ ಎನ್‌ಡಿ ಟಿವಿಗೆ ಆದೇಶಿಸಿದೆ. 
 
ನೀವು ಬಿತ್ತರಿಸಿರುವ ಮಾಹಿತಿ ಉಗ್ರರ ಕೈಗೆ ಸಿಕ್ಕರೆ ಕೇವಲ ದೇಶದ ಭದ್ರತೆಗಷ್ಟೇ ಅಲ್ಲ, ನಾಗರಿಕರ ಮತ್ತು ಭದ್ರತಾ ಸಿಬ್ಬಂದಿ ಜೀವಕ್ಕೂ ಹಾನಿ ತಲುಪಿಸುವಂತದ್ದು ಎಂದು ಕೇಂದ್ರ ಸುದ್ದಿ ವಾಹಿನಿಗೆ ಹೇಳಿದೆ. 
 
 ಕೇಬಲ್ ಕಾಯಿದೆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪವನ್ನು ಸುದ್ದಿ ವಾಹಿನಿ ತಳ್ಳಿ ಹಾಕಿದೆ. ಇತರ ಸುದ್ದಿ ವಾಹಿನಿಗಳು ಅದೇ ಸುದ್ದಿಯನ್ನು ಬಿತ್ತರಿಸಿವೆ ಮತ್ತು ಹಲವು ದಿನಪತ್ರಿಕೆಗಳಲ್ಲಿ ಇದೇ ಸುದ್ದಿ ಪ್ರಕಟವಾಗಿದೆ ಎಂದು ವಾಹಿನಿ ವಾದಿಸಿದೆ.
 
ಈ ನಿಷೇಧಕ್ಕೆ ವಿರೋಧ ಪಕ್ಷಗಳು ಸೇರಿದಂತೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ತುರ್ತುಪರಿಸ್ಥಿತಿ ದಿನಗಳು ನೆನಪಿಗೆ ಬರುತ್ತಿವೆ, ದೇಶ ನಿರಂಕುಶತೆಯತ್ತ ಸಾಗುತ್ತಿದೆ ಎಂದು ವಿಪಕ್ಷಗಳು ಕಿಡಿಕಾರಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೃದಯಾಘಾತವಾಗುವಾಗ ಮುಖದಲ್ಲಿ ಈ ಬದಲಾವಣೆಯಾಗುತ್ತದೆ

ಬೇರೊಬ್ಬನ ಜತೆ ನಿಶ್ಚಿತಾರ್ಥ: ಆಟೊದಲ್ಲೇ ನೇಣಿಗೆ ಶರಣಾದ ಸ್ಥಿತಿಯಲ್ಲಿ ಪ್ರೇಮಿಗಳು ಪತ್ತೆ

ಹಾಸನದಲ್ಲಿ ಮತ್ತೊಂದು ಹೃದಯಾಘಾತ: ನವವಿವಾಹಿತ ಸಾವು

ತಮಿಳುನಾಡು ವ್ಯಕ್ತಿಯ ಲಾಕಪ್ ಡೆತ್ ಪ್ರಕರಣ: ಐದು ಪೊಲೀಸರು ಅರೆಸ್ಟ್‌

ಮೂರು ವರ್ಷಗಳಿಂದ ಫ್ಲ್ಯಾಟ್ ನಲ್ಲಿ ಲಾಕ್ ಮಾಡಿಕೊಂಡಿದ್ದ ವ್ಯಕ್ತಿ: video

ಮುಂದಿನ ಸುದ್ದಿ
Show comments