Select Your Language

Notifications

webdunia
webdunia
webdunia
webdunia

ಸಿಎಂ ಫಡ್ನವಿಸ್ ಮನೆ ಮಂದೆ ಅಂಜಲಿ ದಾಮನಿಯಾ ಪ್ರತಿಭಟನೆ

Anjali Damania
ಮುಂಬೈ , ಗುರುವಾರ, 2 ಜೂನ್ 2016 (11:50 IST)
ರಾಜ್ಯ ಸಚಿವ ಸಂಪುಟದಿಂದ ಏಕನಾಥ್ ಖಾಡ್ಸೆ ರಾಜೀನಾಮೆಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತೆ ಅಂಜಲಿ ದಾಮನಿಯಾ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಅಧಿಕೃತ (ಮುಂಬೈ) ನಿವಾಸದ ಮುಂದೆ ಗುರುವಾರ ಪ್ರತಿಭಟನೆ ನಡೆಸಲಿದ್ದಾರೆ. 

ಮಲಬಾರ್ ಹಿಲ್‌ನಲ್ಲಿರುವ ಸಿಎಂ ಅವರ ಅಧಿಕೃತ ನಿವಾಸ 'ವರ್ಷಾ'ದ ಎದುರುಗಡೆ ಅವರು ಮುಂಜಾನೆ 10 ಗಂಟೆಗೆ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಿದ್ದಾರೆ. 
 
ಭಾರತೀಯ ಜನತಾ ಪಕ್ಷದ ಹಿರಿಯ ಸಚಿವ ಏಕನಾಥ್ ಖಾಡ್ಸೆ ಭೃಷ್ಟಾಚಾರದ ಆರೋಪವನ್ನು ಎದುರಿಸುತ್ತಿದ್ದಾರೆ. 
 
ದಾಮನಿಯಾ ಸರಣಿ ಟ್ವೀಟ್ ಇಂತಿದೆ: 
 
*ತಮ್ಮ ಭೃಷ್ಟಾಚಾರ ವಿರೋಧಿ ಅಜೆಂಡಾದ ಭಾಗವಾಗಿ ಅಣ್ಣಾ ಹಜಾರೆ ಸದ್ಯದಲ್ಲಿಯೇ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಜತೆ ಈ ಕುರಿತಂತೆ ಮಾತನಾಡಲಿದ್ದಾರೆ ಮತ್ತು ಪ್ರಧಾನಿ ಮೋದಿ ಅವರಿಗೆ ಸಹ ಪತ್ರ ಬರೆಯಲಿದ್ದಾರೆ.  
 
*ಖಾಡ್ಸೆ ಹಲವು ಹಗರಣಗಳಲ್ಲಿ ಭಾಗಿಯಾಗಿರುವುದಕ್ಕೆ ಸಾಕ್ಷ್ಯವಾಗಿರುವ ಅನೇಕ ದಾಖಲೆಗಳನ್ನು ತಾನು ಹಜಾರೆಯವರಿಗೆ ತೋರಿಸಿದ್ದೇನೆ. ಅದನ್ನು ನೋಡಿ ಅವರು ಶಾಕ್ ಆಗಿದ್ದಾರೆ. 
 
ಏತನ್ಮಧ್ಯೆ ಸೂಕ್ಷ್ಮ ವಿಐಪಿ ವಲಯದಲ್ಲಿ ಪ್ರತಿಭಟನೆ ನಡೆಸುವುದನ್ನು ವಿರೋಧಿಸಿ ದಾಮನಿಯಾ ಅವರಿಗೆ ಮುಂಬೈ ಪೊಲೀಸ್ ನೊಟೀಸ್ ನೀಡಿದೆ. 
 
ಕೆಲವು ಬಿಜೆಪಿ ಕಾರ್ಯಕರ್ತರು ಮತ್ತು ಖಾಡ್ಸೆ ಅವರ ಬೆಂಬಲಿಗರು ಉತ್ತರ ಮಹಾರಾಷ್ಟ್ರದ ಜಿಲ್ಲೆ ಜಲಗಾಂವ್ ( ಸಚಿವ ಖಾಡ್ಸೆ ಮೂಲನೆಲೆ) ದಾಮನಿಯಾ ಪ್ರತಿಕ್ರತಿಯನ್ನು  ದಹಿಸಿ ವಿರೋಧ ವ್ಯಕ್ತ ಪಡಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ಪ್ರತಿಭಟನೆ: ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ಬಂಧನ