Select Your Language

Notifications

webdunia
webdunia
webdunia
webdunia

ಕೋಚ್ ಹುದ್ದೆ ಕಳೆದುಕೊಳ್ತಾರಾ ಅನಿಲ್ ಕುಂಬ್ಳೆ? ಸತ್ಯ ಇಲ್ಲಿದೆ!

ಕೋಚ್ ಹುದ್ದೆ ಕಳೆದುಕೊಳ್ತಾರಾ ಅನಿಲ್ ಕುಂಬ್ಳೆ? ಸತ್ಯ ಇಲ್ಲಿದೆ!
Mumbai , ಭಾನುವಾರ, 12 ಮಾರ್ಚ್ 2017 (18:47 IST)
ಮುಂಬೈ: ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಹುದ್ದೆ ಕಳೆದುಕೊಳ್ಳುತ್ತಾರೆ. ಅವರ ಸ್ಥಾನಕ್ಕೆ ಜ್ಯೂನಿಯರ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಬರುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಇದು ನಿಜವಾ?

 
ಈ ಬಗ್ಗೆ ಸ್ವತಃ ಬಿಸಿಸಿಐ ಆಡಳಿತಾಧಿಕಾರಿಗಳಲ್ಲೊಬ್ಬರಾದ ಎಡುಲ್ಜಿ ಸ್ಪಷ್ಟನೆ ನೀಡಿದ್ದಾರೆ. ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಆಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರನ್ನು ಬದಲಿಸುವ ಮತ್ತು ಭಾರತೀಯ ಕ್ರಿಕೆಟ್ ತಂಡದ ಮಹಾನಿರ್ದೇಶಕನಾಗಿ ತೊಡಗಿಸುವ ಯಾವುದೇ ಆಲೋಚನೆ ಸದ್ಯಕ್ಕಿಲ್ಲ.

ಅಲ್ಲದೆ ರಾಹುಲ್ ದ್ರಾವಿಡ್ ಯಥಾವತ್ತು ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಎಡುಲ್ಜಿ ಮಾಧ್ಯಮಗಳಲ್ಲಿ ಬಂದ ವರದಿಗೆ ಸ್ಪಷ್ಟನೆ ನೀಡಿದ್ದಾರೆ.  ಅನಿಲ್ ಕುಂಬ್ಳೆಯ ಸ್ಥಾನವನ್ನು ರಾಹುಲ್ ದ್ರಾವಿಡ್ ಗೆ ನೀಡಲಾಗುತ್ತದೆ ಎಂದು ವರದಿಯಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಹುಮತವಿಲ್ಲದಿದ್ದರೂ ಗೋವಾದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಕಸರತ್ತು